ಕಸಾಯಿಖಾನೆಗೆ ಸಾಗಿಸುತ್ತಿದ್ದ 38 ಜಾನುವಾರುಗಳ ರಕ್ಷಣೆ

ಮೈಸೂರು: ಕಸಾಯಿಖಾನೆಗೆ ಸಾಗಿಸುತ್ತಿದ್ದ ಜಾನುವಾರುಗಳನ್ನು ಕವಲಂದೆ ಪೊಲೀಸರು ರಕ್ಷಿಸಿದ್ದಾರೆ.

ನಂಜನಗೂಡು ಚಾಮರಾಜನಗರ ರಸ್ತೆಯಿಂದ ಬಂದ ಕಂಟೇನರ್ ವಾಹನವನ್ನು ಕವಲಂದೆ ಮತ್ತು ಚಾಮರಾಜನಗರ ಮುಖ್ಯ ರಸ್ತೆ, ಕವಲಂದೆ ಗ್ರಾಮದ ಬಳಿ ಪರಿಶೀಲಿಸಿದಾಗ ವಾಹನದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದುದು ಗೊತ್ತಾಗಿದೆ‌

ವಾಹನದಲ್ಲಿ ಎಮ್ಮೆ, ಹಸು, ಎತ್ತು ಮತ್ತು ಕರುಗಳು ಸೇರಿ ಒಟ್ಟು 38 ಜಾನುವಾರುಗಳಿದ್ದು ಎಕ್ಲವನ್ನೂ ರಕ್ಷಿಸಿ ಪಿಂಜರಾಪೋಲ್ ಗೆ ಬಿಟ್ಟಿದ್ದಾರೆ.

ವಾಹನದ ಚಾಲಕನನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ತಮಿಳುನಾಡಿನ ತಾಳವಾಡಿ ಕಡೆಗೆ ಜಾನುವಾರುಗಳನ್ನು ಸಾಗಿಸಲಾಗುತ್ತಿತ್ತು ಎಂದು ‌ವಿಚಾರಣೆ ವೇಳೆ ಗೊತ್ತಾಗಿದೆ.

ಕಾರ್ಯಾಚರಣೆಯಲ್ಲಿ ಕವಲಂದೆ ಪೊಲೀಸ್ ಠಾಣೆಯ ಪಿಎಸ್ಐ ಬಿ. ಬಸವರಾಜು, ಸಿಬ್ಬಂದಿಗಳಾದ ಎಸ್.ಬಿ. ಜಿ.ಪಿ.ರಮೇಶ್, ಮಹದೇವಶೆಟ್ಟಿ, ರಮೇಶ್ ಪಾಲ್ಗೊಂಡಿದ್ದರು.