ನುಡಿ ನಮನದೊಂದಿಗೆ ಪುನೀತ್ ರಾಜಕುಮಾರ್ ಸ್ಮರಣೆ

ಮೈಸೂರು: ಮೈಸೂರಿನ ರಾಮನುಜ ರಸ್ತೆಯಲ್ಲಿರುವ ಜೆ.ಎಸ್.ಎಸ್. ಸಂಸ್ಥೆಯವರ ದೃಷ್ಟಿ ದೋಷವುಳ್ಳ ಉದ್ಯೋಗಸ್ಥ ಹಾಗೂ ವಿದ್ಯಾರ್ಥಿನಿಯರ ನಿಲಯದವರಿಗೆ ಎಸ್ ಪ್ರಕಾಶ್ ಪ್ರಿಯಾದರ್ಶನ ಸ್ನೇಹ ಬಳಗದ ವತಿಯಿಂದ ಡ್ರೈ ಫ್ರೂಟ್ಸ್,ಹಣ್ಣು ಹಂಪಲ, ವಿತರಿಸುವ
ಮೂಲಕ ಪುನೀತ್ ರಾಜಕುಮಾರ್
ಅವರಿಗೆ ನುಡಿ ನಮನ ಸಲ್ಲಿಸಲಾಯಿತು.

ಅಪ್ಪು‌ಜನ್ಮದಿನ ಪ್ರಯುಕ್ತ ಈ ಸೇವಾ ಕಾರ್ಯ ಹಮ್ಮಿಕೊಳ್ಳಲಾಯಿತು.

ಪುನೀತ್ ರಾಜಲುಮಾರ್ ಸ್ಮರಣೆ ಮಾಡುವ ಮೂಲಕ ಅಪ್ಪು ಕೋಟ್ಯಾಂತರ ಅಭಿಮಾನಿಗಳ ಹೃದಯದಲ್ಲಿ ಅಜರಾಮರವಾಗಿದ್ದಾರೆ ಎಂದು ಸ್ನೇಹ ಬಳಗದಿಂದ ನುಡಿ ನಮನ ಸಲ್ಲಿಸಲಾಯಿತು.

ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಜೆಡಿಎಸ್ ಕಾರ್ಯಾಧ್ಯಕ್ಷ ಪ್ರಕಾಶ್ ಪ್ರಿಯಾದರ್ಶನ್ ಮನುಷ್ಯ ಹುಟ್ಟಿದ ಕ್ಷಣದಿಂದಲೇ ಅವನ ಪಯಣ ಆರಂಭ.ಬಾಳ ಪಯಣ ಎಂದರೆ ಕೇವಲ ಸುಖದ ಹಾದಿಯಲ್ಲ. ಅದು ಒಂದು ಅದ್ಭುತ ಅನುಭವಗಳ ಸರಮಾಲೆ ಎಂದು ಹೇಳಿದರು.

ಬಾಳನ್ನು ಸಾರ್ಥಕವಾಗಿ ಬದುಕುವ, ಇತರರಿಗೆ ಸಹಾಯ ಮಾಡುವ, ಪ್ರೀತಿ ಮತ್ತು ಮಾನವೀಯತೆಯನ್ನು ಹಂಚುವುದು ಬಾಳ ಪಯಣದ ನಿಜವಾದ ಅರ್ಥ ಎಂದು ನಮ್ಮೆಲ್ಲರಿಗೂ ತಿಳಿಸಿ ಹೋದ ಅದ್ಭುತ ನಟ ಪುನೀತ್ ರಾಜಕುಮಾರ್ ಎಂದು ಬಣ್ಣಿಸಿದರು.

ರಾಜ್ಯದ ಅನೇಕ ಜನರ ಬಾಳನ್ನು ಬೆಳಗಿಸಿದ ನಂದಾ ದೀಪ ಈ ರೀತಿಯ ವ್ಯಕ್ತಿತ್ವ ಉಳ್ಳ ಮಹಾ ಚೇತನ ಅಪ್ಪು ಮನುಷ್ಯತ್ವಕ್ಕೆ ದೊಡ್ಡ ಉದಾಹರಣೆ. ಅಪ್ಪು ಅವರು ಸಮಾಜದಿಂದ ಪಡೆದು ಸಮಾಜಕ್ಕೆ ಹಲವಾರು ಕಾಣಿಕೆಗಳನ್ನು ಕೊಟ್ಟು ಹೋಗಿದ್ದಾರೆ ತಮ್ಮ ಗುರುತನ್ನು ಬಿಟ್ಟು ಹೋಗಿದ್ದಾರೆ ಎಂದು ಪ್ರಕಾಶ್ ಪ್ರಿಯದರ್ಶನ್ ಹೇಳಿದರು.

ನಟನಾಗಿ ಮಾತ್ರವಲ್ಲ ಸಾಮಾಜಿಕ ಕಳಕಳಿ ಮತ್ತು ನಿಸ್ವಾರ್ಥ ಸೇವೆಗಳಿಂದ ಇತರರಿಗೆ ಮಾದರಿಯಾದವರು ಅಪ್ಪು ಇಂದು ನಮ್ಮ ಜೊತೆ ಇಲ್ಲದಿದ್ದರೂ ಅವರ ಸರಳತೆ, ಸಜ್ಜನಿಕೆ,ಬದುಕಿನ ಪ್ರೀತಿ ಎಲ್ಲರದಲ್ಲೂ ಜೀವಂತವಾಗಿಸಿದೆ. ಎಂದಿಗೂ ಮಾಸದ ನಗು ಮುಖದ ಅಪ್ಪುವಿಗೆ ಕೋಟ್ಯಾಂತರ ಅಭಿಮಾನಿಗಳ ಹೃದಯದಲ್ಲಿ ಅಜರಾಮರವಾಗಿ ಉಳಿದಿರುವ ನಮ್ಮೆಲ್ಲರ ಪ್ರೀತಿಯ ಅಪ್ಪು ಸೇವಾ ಕಾರ್ಯಗಳನ್ನು ಅವರ ಜನ್ಮದಿನದಂದು ಸ್ಮರಿಸುವುದು ಮತ್ತು ಇವತ್ತಿನ ಯುವ ಪೀಳಿಗೆಗೆ ತಿಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಿಂಚನಗೌಡ, ಹಿರಿಯ ಕ್ರೀಡಾಪಟು ಮಹದೇವ್ , ಛಾಯಾ, ಗಾಯಕ ಯಶ್ವಂತ್ ಕುಮಾರ್, ಬಿಜೆಪಿ ಮುಖಂಡ ಪುರುಷೋತ್ತಮ್, ರಾಜೇಶ್ ಕುಮಾರ್,ಮಹೇಶ, ಎಸ್ ಪಿ ಅಕ್ಷಯ್ ಪ್ರಿಯಾದರ್ಶನ್,ಹರ್ಷಿತ್ ಎಸ್ ನಾಗೇಶ್,ದತ್ತ,ಮತ್ತಿತರರು ಹಾಜರಿದ್ದರು.