ಹುಣಸೂರು: ಬಾಕಿ ಸಂಬಳ ನೀಡಲು ಲಂಚ ಪಡೆದ ಪಿಡಿಒ ಲೋಕಾಯುಕ್ತ ಬಲೆಗೆ ಸಿಕ್ಕಿ ಬಿದ್ದಿದ್ದಾರೆ.
ಹುಣಸೂರು ತಾಲೂಕು ಮುಳ್ಳೂರು ಗ್ರಾಮದ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಮಂಜುಳಾ ರೆಡ್ ಹ್ಯಾಂಡ್ ಆಗಿ 25 ಸಾವಿರ ಲಂಚ ಪಡೆಯುವಾಗ ಕಚೇರಿಯಲ್ಲೇ ಲೋಕಾ ಬಲೆಗೆ ಬಿದ್ದಿದ್ದಾರೆ.
ನೀರುಗಂಟಿಯಾಗಿ ಕೆಲಸ ಮಾಡುತ್ತಿದ್ದ ಸ್ವಾಮಿ ಎಂಬುವರು ಕರ್ತವ್ಯದಲ್ಲಿದ್ದ ವೇಳೆ ಮೃತಪಟ್ಟಿದ್ದಾರೆ.ಅನುಕಂಪದ ಆಧಾರದ ಮೇಲೆ ಸ್ವಾಮಿ ಅವರ ಮಗ ಮಹದೇವ್ ಎಂಬುವರಿಗೆ ಕೆಲಸ ನೀಡಲಾಗಿದೆ.
ತಂದೆ ಕರ್ತವ್ಯ ನಿರ್ವಹಿಸಿದ್ದ ಎರಡು ವರ್ಷದ ಸಂಬಳ ಬಾಕಿ ನೀಡುವಂತೆ ಮಹದೇವ್ ಮನವಿ ಮಾಡಿದ್ದಾರೆ.
ಬಾಕಿ ಸುಮಾರು ನಾಲ್ಕು ಲಕ್ಷ ರೂ ವೇತನ ನೀಡಲು ಮಂಜುಳ 50 ಸಾವಿರ ರೂ ನೀಡುವಂತೆ ಲಂಚ ಕೇಳಿದ್ದಾರೆ.
ಮಂಜುಳಾ ಕಿರುಕುಳಕ್ಕೆ ಬೇಸತ್ತ ಮಹದೇವ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದಾರೆ.
ಮಹದೇವ್ ರಿಂದ 25 ಸಾವಿರ ರೂ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ರೆಡ್ ಹ್ಯಾಂಡಾಗಿ ಪಿಡಿಒ ಮಂಜುಳಾರನ್ನು ಹಿಡಿದಿದ್ದಾರೆ.
ಈ ವೇಳೆ ಮಂಜುಳಾ ತನ್ನ ಕೈಯನ್ನ ಹರಿತವಾದ ಆಯುಧದಿಂದ ಕೊಯ್ದುಕೊಂಡಿದ್ದಾರೆಂದು ಹೇಳಲಾಗಿದೆ.
ಗಾಯಗೊಂಡ ಆಕೆಯನ್ನ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

