(ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ)
ಚಾಮರಾಜನಗರ: ಮಂಡ್ಯ ಜಿಲ್ಲೆಯಲ್ಲಿ ಹಬ್ಬಕ್ಕೆ ಶುಭ ಕೋರುವ ಪ್ಲೆಕ್ಸ್ ಗಳಲ್ಲಿ ಮಂಡ್ಯ ಎಸ್ಪಿ ಶೋಭರಾಣಿ ಮಿಂಚಿದ ಕಾರಣದಿಂದಾಗಿ ವ್ಯಾಪಕ ಚರ್ಚೆಯಾದ ಬಳಿಕ ತೆರೆವು ಕಾರ್ಯ ನಡೆಯಿತು.
ಇದೀಗ ಚಾಮರಾಜನಗರದಲ್ಲೂ ಈ ಚಾಳಿ ಮುಂದುವ ರಿದಿದೆ.
ಖಾಸಗಿ ಕಾರ್ಯಕ್ರಮ ಆಯೋಜಕರೂ ಕೂಡ ಅದಿಕಾರಿಗಳ ಪೊಟೊ ಬಳಸಿಕೊಂಡು ಪ್ಲೆಕ್ಸ್ ಹಾಕಿರುವುದು ತೀವ್ರ ಚರ್ಚೆಗೆ ಗ್ರಾಸ ಒದಗಿಸಿದೆ.
ಚಾಮರಾಜನಗರ ವಿಶ್ವ ವಿದ್ಯಾನಿಲಯ ಮತ್ತು ಶ್ರೀ ಯೋಗಿನಾರೇಯಣ ಯತೀಂದ್ರರ ಪ್ರಚಾರ ಸಭಾ,ಮೈಸೂರು ಇವರ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದೆ.
ಕೈವಾರ ಸದ್ಗುರು ಯೋಗಿನಾರಾಯೇಣ ಯೋಗಿಗಳ ಪರಿಚಯ ಮತ್ತು ಅತ್ಯಮೋಧ ಕುರಿತು ವಿಚಾರ ಸಂಕಿರಣ ಹಾಗೂ “ಯತೀಂದ್ರ ಶ್ರೀ” ಪ್ರಶಸ್ತಿ ಪ್ರಧಾನ ಸಮಾರಂಭ ಕಾರ್ಯಕ್ರಮ ಇದ್ದು ಈ ಕಾರ್ಯಕ್ರಮಕ್ಕೆ ಆಗಮಿಸುವ ಅತಿಥಿಗಳ ಪ್ರಚಾರಕ್ಕೆ ಫ್ಲೆಕ್ಸ್ ಗಳಲ್ಲಿ ಅದಿಕಾರಿಗಳ ಪೊಟೊ ಬಳಸಿಕೊಂಡಿರೊದು ನೋಡಿದರೆ ಅನುಮತಿ ಪಡೆದೇ ಹಾಕಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ಒಟ್ಟಾರೆ ಮಂಡ್ಯ ಆಯ್ತು ಇದೀಗ ಚಾಮರಾಜ ನಗರ.ಈ ಗೀಳು ಹಂತ ಹಂತವಾಗಿ ಎಲ್ಲ ಜಿಲ್ಲೆಗಳಲ್ಲೂ ಹರಡೊ ಸಾದ್ಯತೆಗಳಿದೆ.
ಇತ್ತ ಡಿಸಿಎಂ ಅದಿಕೃತ ಪ್ಲೆಕ್ಸ್ ಬಗ್ಗೆ ಕಿಡಿ ಕಾರಿದ್ದು ಅದಿಕೃತ ಪ್ಲೆಕ್ಸ್ ಅನದಿಕೃತ ಪ್ಲೆಕ್ಸೊ ಎಂಬುದು ನಗರಸಬಾ ಅದಿಕಾರಿಗಳು ಸ್ಪಷ್ಟಪಡಿಸುವಲ್ಲಿ ವೈಪಲ್ಯರಾಗಿದ್ದಾರೆ.
ಇಂತಹ ಜಿಲ್ಲಾ ಮಟ್ಟದ ಅದಿಕಾರಿಗಳ ಪೊಟೊಗಳನ್ನ ಬಳಸಿಕೊಂಡವರಿಗೆ ದಂಡ ಹಾಕಲಾಗುತ್ತದೆಯೆ ಹಾಕುವವರು ಯಾರು ಎಂಬುದನ್ನು ಕಾದುನೋಡಬೇಕಿದೆ.

