ಸುದ್ದಿ ಪ್ರಸಾರವಾದ ಕ್ಷಣಾರ್ದದಲ್ಲೆ ಪ್ಲೆಕ್ಸ್ ತೆರವುಗೊಳಿಸಿದ ಅದಿಕಾರಿಗಳು!

(ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ)

ಚಾಮರಾಜನಗರ: ಪ್ಲೆಕ್ಸ್ ಗಳಲ್ಲಿ ಪ್ರಚಾರಕ್ಕಿಳಿದ್ರಾ ಜಿಲ್ಲಾ ಮಟ್ಟದ ಅದಿಕಾರಿಗಳು.!? ಎಂಬ ಶೀರ್ಷಿಕೆಯಡಿ ಸುದ್ದಿ ಪ್ರಸಾರವಾದ ಬೆನ್ನಲ್ಲೇ ಅದಿಕಾರಿಗಳು ಎಚ್ಚೆತ್ತು ತೆರವುಗೊಳಿಸಿಬಿಟ್ಟಿದ್ದಾರೆ‌!

ಮಂಡ್ಯ ಜಿಲ್ಲೆಯಲ್ಲಿ ಯುಗಾದಿ ಹಬ್ಬಕ್ಕೆ ಶುಭ ಕೋರುವ ಪ್ಲೆಕ್ಸ್ ಗಳಲ್ಲಿ ಮಂಡ್ಯ ಎಸ್ಪಿ ಶೋಭರಾಣಿ ಮಿಂಚಿದ ಕಾರಣದಿಂದಾಗಿ ವ್ಯಾಪಕ ಚರ್ಚೆಯಾದ ಬಳಿಕ ತೆರೆವು ಕಾರ್ಯ ನಡೆಯಿತು.

ಅದರಂತರ ಚಾಮರಾಜನಗರದಲ್ಲೂ ಖಾಸಗಿ ಕಾರ್ಯಕ್ರಮ ಆಯೋಜಕರೂ ಕೂಡ ಜಿಲ್ಲಾ ಅದಿಕಾರಿ ಜಿಲ್ಲಾ ಎಸ್ಪಿ ಅವರ ಪೊಟೊ ಬಳಸಿಕೊಂಡು ಪ್ಲೆಕ್ಸ್ ಹಾಕಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು.

ಚಾಮರಾಜನಗರ ವಿಶ್ವ ವಿದ್ಯಾನಿಲಯ ಮತ್ತು ಶ್ರೀ ಯೋಗಿನಾರೇಯಣ ಯತೀಂದ್ರರ ಪ್ರಚಾರ ಸಭಾ,ಮೈಸೂರು ಇವರ ಸಂಯುಕ್ತಾಶ್ರಯದಲ್ಲಿ
ಕೈವಾರ ಸದ್ಗುರು ಯೋಗಿನಾರಾಯೇಣ ಯೋಗಿಗಳ ಪರಿಚಯ ಮತ್ತು ಅತ್ಯಮೋಧ ಕುರಿತು ವಿಚಾರ ಸಂಕಿರಣದ ಹಾಗೂ “ಯತೀಂದ್ರ ಶ್ರೀ” ಪ್ರಶಸ್ತಿ ಪ್ರಧಾನ ಸಮಾರಂಭ ಇದ್ದು ಈ ಕಾರ್ಯಕ್ರಮಕ್ಕೆ ಆಗಮಿಸುವ ಅತಿಥಿಗಳ ಪ್ರಚಾರಕ್ಕೆ ಅದಿಕಾರಿಗಳ ಪೊಟೊ ಬಳಸಿಕೊಂಡಿಸಿರೊದು ನೋಡಿದರೆ ಅನುಮತಿ ಪಡೆದೆ ಹಾಕಲಾಗಿದೆ ಎಂಬ ಮಾತುಗಳು ಕೇಳಿ ಬಂದಿದ್ದವು.

ಆದರೆ ಇದೀಗ ಫೋಟೋಗಳನ್ನು ತೆರವು ಮಾಡಿದ್ದು ಗಮನಾರ್ಹವಾಗಿದೆ.

ಅದಿಕೃತ ಪ್ಲೆಕ್ಸ್ ,ಅನದಿಕೃತ ಪ್ಲೆಕ್ಸೊ ಎಂಬುದು ನಗರಸಬಾ ಅದಿಕಾರಿಗಳು ಸ್ಪಷ್ಟಪಡಿಸುವಲ್ಲಿ ವಿಫಲರಾಗಿದ್ದು ಪಟ್ಟಣದಲ್ಲಿ ದಿನೆ ದಿನೆ ಅದರಲ್ಲೂ ಜೋಡಿರಸ್ತೆಯಲ್ಲಿ ಪ್ಲೆಕ್ಸ್ ಆರ್ಭಟ ಶುರುವಾಗುತ್ತದೆ‌.

ಇತ್ತ ಇಂತ ಜಿಲ್ಲಾ ಮಟ್ಟದ ಅದಿಕಾರಿಗಳ ಪೊಟೊಗಳನ್ನ ಬಳಸಿಕೊಂಡರೆ ಉಚಿತವಾಗಿ ಪ್ರಚಾರದ ಜೊತೆಗೆ ಸೇಪ್ಟಿ ಕೂಡ ಸಿಗಲಿದೆ ಎಂಬ ಕಾರಣಕ್ಕೆ ಹಾಕಲಾಗುತ್ತದೆ ಎಂಬ ಚರ್ಚೆ ಕೂಡ ನಡೆಯುತ್ತಿದೆ.

ನಗರಸಬಾ ಅದಿಕಾರಿಗಳು ಹಾಕೊ ತನಕ ಕಣ್ಮುಚ್ಚಿ ಕುಳಿತು ಸುದ್ದಿ ಮಾಡಿ ಎಚ್ಚರಿಸಿದಾಗ ಎಚ್ಚತ್ತುಕೊಳ್ಳುವುದು ನೋಡಿದರೆ ಅದಿಕಾರಿಗಳ ಬೇಜವಬ್ದಾರಿತನ ಎದ್ದು ಕಾಣುತ್ತಧ. ಈ ಬಗ್ಗೆ ಜಿಲ್ಲಾಡಳಿತವೆ ಸಮಪರ್ಕವಾಗಿ ಆದೇಶಿಸಬೇಕಿದೆ.