ಮೈಸೂರು: ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯವಾದ ಪರಿಣಾಮ ಮಧ್ಯಮ ವರ್ಗದ ಹೋಟೆಲ್‌ಗಳಿಗೆ ಸಿಲಿಂಡರ್ ಕೊರತೆಯಾಗಿ ಹೋಟೆಲ್‌ಗಳು ಸರಿಯಾಗಿ ನಡೆಯದೆ ಜಿಲ್ಲೆಯಲ್ಲಿ ತರಕಾರಿಗೆ ಬೇಡಿಕೆ ಕುಸಿಯುತ್ತಿದೆ.
ಪರಿಸ್ಥಿತಿ ಇದೇ ರೀತಿ ಕೆಲ ದಿನ ಮುಂದುವರಿದರೆ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಬೇಕಾಗುತ್ತದೆ.
ಜಿಲ್ಲೆಯಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ ತರಕಾರಿ ಬೆಳೆಯುತ್ತಾರೆ. ಈ ತರಕಾರಿ ಕೇವಲ ಜಿಲ್ಲೆಯ ಜನರು ಖರೀದಿಸುವುದು ಮಾತ್ರವಲ್ಲದೆ ಕೊಡಗು, ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕೇರಳ ರಾಜ್ಯಕ್ಕೆ ಹೆಚ್ಚಿನ ಪ್ರಮಾಣ ದಲ್ಲಿ ಪೂರೈಕೆಯಾಗುತ್ತದೆ.
ಆದರೆ, ಇರಾನ್ ಅಮೆರಿಕ – ಇಸ್ರೇಲ್ ಯುದ್ಧ ನಡೆಸುತ್ತಿರುವ ಹಿನ್ನೆಲೆಯಲ್ಲಿ ಗ್ಯಾಸ್ ಪೂರೈಕೆಯಲ್ಲಿ ದೊಡ್ಡ ಪ್ರಮಾಣದ ವ್ಯತ್ಯಯ ಉಂಟಾಗಿದೆ. ಹಾಗಾಗಿ ಜಿಲ್ಲೆಯಲ್ಲಿ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ.
ಸಿಲಿಂಡರ್ ದೊರೆಯದೆ ಸಾಕಷ್ಟು ಹೋಟೆಲ್‌ಗಳು ಹಾಗೂ ರಸ್ತೆ ಬದಿ ವ್ಯಾಪಾರಿಗಳು ತರಕಾರಿಯ ಬಳಕೆ ಪ್ರಮಾಣವನ್ನು ಕಡಿಮೆ ಮಾಡಿದ್ದಾರೆ.
ಆದ್ದರಿಂದ ಜಿಲ್ಲೆಯಲ್ಲಿ ತರಕಾರಿಗೆ ಬೇಡಿಕೆ ಕುಸಿದಿದೆ, ಬೆಲೆ ಗಣನೀಯವಾಗಿ ಕುಸಿಯಲು ಪ್ರಾರಂಭವಾಗಿದೆ.
ಜಿಲ್ಲೆಯ ರೈತರು ಉತ್ತಮ ಬೆಲೆ ದೊರೆಯುವ ನಿರೀಕ್ಷೆಯಲ್ಲಿ ತರಕಾರಿ ಬೆಳೆಗಳನ್ನು ಬೆಳೆದಿದ್ದರು. ಆದರೆ ತರಕಾರಿಗೆ ಬೇಡಿಕೆ ಕುಸಿದಿರುವ ಹಿನ್ನೆಲೆಯಲ್ಲಿ ರೈತರು ನಷ್ಟ ಅನುಭವಿಸುವ ಪರಿಸ್ಥಿತಿ ಎದುರಾಗಿದೆ.
ಜಿಲ್ಲೆಯಲ್ಲಿ ಮಾರ್ಚ್ ೧೦ರ ನಂತರ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಪೂರೈಕೆಯನ್ನು ಸಂಪೂರ್ಣ ಸ್ಥಗಿತಗೊಳಿಸಲಾಯಿತು. ನಂತರ, ರಾಜ್ಯ ಸರ್ಕಾರ ಶೇ.೨೦ರಷ್ಟು ಕಮರ್ಷಿಯಲ್ ಸಿಲಿಂಡರ್ ಪೂರೈಸಲು ಅಗತ್ಯ ಕ್ರಮಕೈಗೊಂಡರೂ ಕೆಲವು ಹೋಟೆಲ್‌ಗಳಿಗೆ ಸಾಕಾಗದೆ ತಿಂಡಿ ಪದಾರ್ಥಗಳ ತಯಾರಿಯನ್ನು ಕಡಿಮೆ ಮಾಡಿವೆ.
ಮಾ.೧೦ ರವರೆಗೆ ಜಿಲ್ಲೆಯಲ್ಲಿ ತರಕಾರಿಗೆ ಉತ್ತಮ ಬೆಲೆ ಇತ್ತು. ನಂತರ ಬೆಲೆ ಕುಸಿಯಲು ಪ್ರಾರಂಭವಾಯಿತು. ವಿಶೇಷವಾಗಿ ಬೀನ್ಸ್ ಬೆಲೆ ಮೊದಲು ಕುಸಿಯಲು ಪ್ರಾರಂಭವಾಗಿದ್ದು ಉಳಿದ ತರಕಾರಿ ಪಾಡು ಭಿನ್ನಾವಾಗೇನಿಲ್ಲ.ಇದು ಇನ್ನೂ ಎಷ್ಟು ದಿನ ಕಾದು ನೋಡಬೇಕಿದೆ

