ನೀರನ್ನು ಮಿತವಾಗಿ ಬಳಸಿ, ಸಂರಕ್ಷಣೆ ಮಾಡಿ:ನಾರಾಯಣ ಗೌಡ

ಮೈಸೂರು: ನೀರು ಅಮೂಲ್ಯ ಜೀವಜಲ ಆಗಿದ್ದು, ಅದರ ಸಂರಕ್ಷಣೆ ಮತ್ತು ಮಿತ ಬಳಕೆ ಬಗ್ಗೆ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎಂದು ಹೋಟೆಲ್ ಮಲಿಕರ ಸಂಘದ ಅಧ್ಯಕ್ಷ ನಾರಾಯಣಗೌಡ ಕಿವಿಮಾತು ಹೇಳಿದರು.

ಅಪೂರ್ವ ಸ್ನೇಹ ಬಳಗದ ವತಿಯಿಂದ ವಿಶ್ವ ಜಲ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಹೋಟೆಲ್ ಗಳಲ್ಲಿ ನೀರಿನ ಮಿತ ಬಳಕೆ ಜಾಗೃತಿ ಕಾರ್ಯಕ್ರಮದಲ್ಲಿ ಪಸಲ್ಗೊಂಡುಅವರು ಮಾತನಾಡಿದರು.

ನೀರನ್ನು ಮಿತವಾಗಿ ಬಳಸದಿದ್ದರೆ ಮುಂದಿನ ದಿನಗಳಲ್ಲಿ ನೀರಿಗಾಗಿಯೇ ಯುದ್ಧ ಮಾಡುವಂಥ ಪರಿಸ್ಥಿತಿ ಎದುರಾಗಲಿದೆ. ನೀರಿನ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಅವಶ್ಯ ಎಂದು ಹೇಳಿದರು.

ನೀರು ಜೀವಜಲ ಎನ್ನುತ್ತೇವೆ, ಮನುಷ್ಯ ಕೇವಲ ನೀರನ್ನು ಮಾತ್ರ ಸೇವಿಸಿ 21 ದಿನಗಳ ವರೆಗೂ ಬದುಕಬಲ್ಲ. ಹೀಗಿರುವಾಗ ನೀರಿನ ಸಂರಕ್ಷಣೆ ಎಷ್ಟು ಮುಖ್ಯ ಎಂಬುದು ತಿಳಿಯುತ್ತದೆ.

ಅರಬ್ ದೇಶಗಳಲ್ಲಿ ಏನೆಲ್ಲಾ ಐಷಾರಾಮಿ ವಸ್ತುಗಳು ಸಿಗುತ್ತದೆ. ಆದರೆ, ನೀರನ್ನು ಹಣ ಕೊಟ್ಟು ಕೊಳ್ಳುತ್ತಾರೆ. ಆದರೆ ನಮ್ಮಲ್ಲಿ ನೀರು ಧಾರಾಳವಾಗಿ ದೊರೆಯುತ್ತದೆ, ಆದರೆ ಅದನ್ನ ತುಂಬಾ ಪೋಲು ಮಾಡುತ್ತೇವೆ. ಇದು ಹೀಗೇ ಮುಂದುವರೆದಲ್ಲಿ ಮುಂದಿನ ಪೀಳಿಗೆಗೆ ನೀರನ್ನು ಹೆಚ್ಚು ಹಣ ಕೊಟ್ಟು ಕೊಳ್ಳುವ ಸ್ಥಿತಿ ಬಂದುಬಿಡುತ್ತದೆ ಆದ್ದರಿಂದ ನೀರನ್ನು ಮಿತವಾಗಿ ಬಳಸುವುದು ಇಂದಿನ ಅಗತ್ಯಗಳಲ್ಲೊಂದಾಗಿದೆ ಎಂದು ತಿಳಿಹೇಳಿದರು.

ಮಾನವ ವೈಜ್ಞಾನಿಕವಾಗಿ ಚಂದ್ರಗ್ರಹ, ಮಂಗಳ ಗ್ರಹಕ್ಕೆ ಸಲೀಸಾಗಿ ಹೋಗಿಬರುವಷ್ಟು ಎತ್ತರಕ್ಕೆ ಬೆಳೆದಿದ್ದಾನೆ. ಆದರೆ ನೀರನ್ನ ಸೃಷ್ಟಿ ಮಾಡಲು ಸಾಧ್ಯವಾಗಿಲ್ಲ. ಇದು ದೇವರು ಕೊಟ್ಟ ಕಾಣಿಕೆ. ಈ ಅಮೂಲ್ಯ ದ್ರವ್ಯ ಕಾಪಾಡುವುದು ಎಲ್ಲರ ಹೊಣೆ ಎಂದು ನಾರಾಯಾಣಗೌಡ ತಿಳಿಸಿದರು.

ಇಸ್ರೇಲ್‌, ಆಸ್ಪ್ರೇಲಿಯಾ ಇನ್ನಿತರ ದೇಶಗಳಲ್ಲಿ ಮಳೆ ಬಂದರೆ ಅದೇ ಪುಣ್ಯ. ಹೀಗಿದ್ದೂ ಆ ದೇಶಗಳು ನೀರಿನ ಸಂರಕ್ಷ ಣೆ ಮಾಡಿಕೊಂಡು ಅಭಿವೃದ್ಧಿ ಹೊಂದುತ್ತಿವೆ. ನಾವು ನೀರು ಪೋಲು ಮಾಡುತ್ತಿದ್ದೇವೆ,ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಮುಂದೆ ನೀರಿನ‌‌ ಅಭಾವ ಕಾಡಲಿದೆ ಎಂದು ಎಚ್ಚರಿಕೆ ನೀಡಿದರು.

ಕಾರ್ಯಕ್ರಮ ದಲ್ಲಿ ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್,
ನಗರ ಪಾಲಿಕೆ ಮಾಜಿ ಸದಸ್ಯರಾದ ಜಗದೀಶ್ ,ದೂರರಾಜಣ್ಣ,ಆನಂದ್ ಜಟ್ಟಿ ಪ್ರಸಾದ್,ನಿವೃತ್ತ ಶಿಕ್ಷಕರಾದ ಮಹಾದೇವಸ್ವಾಮಿ ,ಶಿವಲಿಂಗ ಸ್ವಾಮಿ ,ಗೌರಿಶಂಕರ ನಗರದ ಶಿವು ಮತ್ತಿರರು ಪಾಲ್ಗೊಂಡಿದ್ದರು.