ಅನುಮಾನಸ್ಪದ ಸ್ಥಳಗಳಲ್ಲಿ ಅಬಕಾರಿ ದಾಳಿ

ಮೈಸೂರು: ಅಬಕಾರಿ ಇಲಾಖೆ ವತಿಯಿಂದ ಮೈಸೂರು ನಗರ ಮತ್ತು ಜಿಲ್ಲೆಯ ಅನುಮಾನಸ್ಪದ ಸ್ಥಳಗಳಲ್ಲಿ ಅಬಕಾರಿ ದಾಳಿ ನಡೆಸಲಾಯಿತು.

ಮೈಸೂರು ವಿಭಾಗದ ಅಬಕಾರಿ ಜಂಟಿ ಆಯುಕ್ತರ(ಜಾರಿ ಮತ್ತು ತನಿಖೆ)ನಿರ್ದೇಶನದ ಮೇರೆಗೆ ಇಂದು ಅಬಕಾರಿ ಉಪ ಅಧೀಕ್ಷಕರು, ಮೈಸೂರು ಉಪ ವಿಭಾಗದ ಹೆಚ್.ಕೆ.ರಮೇಶ್ ಅವರ ನೇತೃತ್ವದಲ್ಲಿ, ಅಬಕಾರಿ ನಿರೀಕ್ಷಕರುಗಳು, ಉಪ ನಿರೀಕ್ಷಕರುಗಳು ಹಾಗೂ ಸಿಬ್ಬಂದಿ ಮೈಸೂರಿನ ಬನ್ನಿಮಂಟಪ ಬಡಾವಣೆ, ರಾಡಿಕೋ ಡಿಸ್ಟಿಲರಿ ಸುತ್ತಮುತ್ತ, ಎನ್.ಆರ್.ಮೊಹಲ್ಲಾ ಹಾಗೂ ಸಿ.ವಿ ಮೊಹಲ್ಲಾಗಳಲ್ಲಿನ ಗೋಡನ್‌ಗಳು, ಗುಜರಿ ಅಂಗಡಿಗಳು ಮತ್ತಿತರ ಅನುಮಾನಸ್ಪದ ಸ್ಥಳಗಳ ಮೇಲೆ ಅಬಕಾರಿ ದಾಳಿ ನಡೆಸಲಾಯಿತು.

ಈ ಸಂದರ್ಭದಲ್ಲಿ ಯಾವುದೇ ಅಬಕಾರಿ ವಸ್ತುಗಳಾಗಲೀ ಮತ್ತು ಮಾದಕ ವಸ್ತುಗಳಾಗಲೀ ಕಂಡುಬಂದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.