ಮೈಸೂರು: ಅವಧೂತ ದತ್ತಪೀಠದ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಹೊಯ್ಸಳ ಕರ್ನಾಟಕ ಸಂಘದ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಸೋಲಾರ್ ಗ್ರಿಡ್ ಅಳವಡಿಕೆಗಾಗಿ 9ಲಕ್ಷ ದೇಣಿಗೆ ನೀಡಿದ್ದಾರೆ.
ಮೈಸೂರಿನ ಕೆ. ಆರ್. ವನಂನಲ್ಲಿರುವ ಹೊಯ್ಸಳ ಕರ್ನಾಟಕ ಸಂಘದ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಸೋಲಾರ್ ಗ್ರಿಡ್ ಅಳವಡಿಕೆಗಾಗಿ ದತ್ತ ಜಯಂತಿ ಅಂಗವಾಗಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಕೊಡುಗೆಯಾಗಿ 9 ಲಕ್ಷ ರೂ. ಗಳ ಚೆಕ್ ಅನ್ನು ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷರಾದ ಕೆ. ಆರ್. ಸತ್ಯನಾರಾಯಣ ಅವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೆ.ಆರ್. ಸತ್ಯನಾರಾಯಣ ಅವರು,ಸ್ವಾಮೀಜಿ ಯವರು ಮೊದಲಿನಿಂದಲೂ ನಮ್ಮ ಸಂಘದ ಮೇಲೆ ಕೃಪೆ ಇಟ್ಟು ಪೋಷಿಸುತ್ತಾ ಬಂದಿದ್ದಾರೆ ಎಂದು ತಿಳಿಸಿದರು.
ಶ್ರೀ ಗಳ ಮಾತೃಶ್ರೀ ಮಾತಾ ಜಯಲಕ್ಷ್ಮಿ ಅಮ್ಮ ನವರ ಸ್ಮರಣರ್ಥ ಅನ್ನಪೂರ್ಣ ಮಂದಿರ ವನ್ನು ಕೊಡುಗೆ ನೀಡಿದ್ದಾರೆ, ಈಗ ಆಶೀರ್ವಾದ ಪೂರ್ವಕವಾಗಿ ಸೋಲಾರ್ ಗ್ರಿಡ್ ನೀಡುತ್ತಿರುವುದು ವಿದ್ಯಾರ್ಥಿಗಳಿಗೆ ಬಹಳ ಸಹಕಾರಿ ಯಾಗಲಿದೆ, ಸ್ವಾಮೀಜಿ ಗಳ ಈ ಕೊಡುಗೆ ನಮ್ಮೆಲ್ಲರಿಗೆ ಪ್ರಾತಃ ಸ್ಮರಣೀಯ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಆಶ್ರಮದ ಕಿರಿಯ ಸ್ವಾಮೀಜಿ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿಯವರು, ಆಶ್ರಮದ ವಿನಯ್ ಬಾಬು,ಸಂಘದ ಕಾರ್ಯದರ್ಶಿ ಎನ್. ಎಸ್. ಜಯಸಿಂಹ, ಸಹ ಕಾರ್ಯದರ್ಶಿ ಎಚ್. ಎ. ವಿಜಯಕುಮಾರ್, ಸಂಘದ ನಿರ್ದೇಶಕರುಗಳಾದ ಬಿ. ಕೆ. ವೆಂಕಟೇಶ ಪ್ರಸಾದ್, ವೀಣಾ ಜಿ. ಆರ್, ಲಕ್ಷ್ಮಿ ಎಂ. ಆರ್. ಹಾಸ್ಟೆಲ್‌ನ ವಾರ್ಡನ್ ಎಚ್. ಕೆ. ನಾಗೇಶ್, ವಿಶ್ವಜಿತ್ ಮತ್ತಿತರರು ಹಾಜರಿದ್ದರು.

