ಮೈಸೂರು: ರಾಜ್ಯದಲ್ಲಿ ಮುಖ್ಯ ಮಂತ್ರಿ ಸ್ಥಾನ ಬದಲಾಗುವ ಸಮಯ ಬಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭವಿಷ್ಯ ನುಡಿದಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಲ್ಲಿ ಕುರ್ಚಿಗಾಗಿ ದಿನವೂ ಕಿತ್ತಾಟ ನಡೆಯುತ್ತಿದೆ, ಸಿಎಂ ಸಿದ್ದರಾಮಯ್ಯ ಗ್ಯಾಂಗ್ ಮೊದಲು ನವದೆಹಲಿಗೆ ಹೋದರೆ, ಬಳಿಕ ಡಿಸಿಎಂ ಡಿ.ಕೆ.ಶಿವಕುಮಾರ್ ಗ್ಯಾಂಗ್ ದೆಹಲಿಗೆ ಹೋಗುತ್ತಿದೆ. ಇವರಿಬ್ಬರ ಜಗಳದಲ್ಲಿ ನನಗೇನಾದರೂ ಲಾಭ ಆಗುತ್ತದೆಯೇ ಎಂದು ಮಲ್ಲಿಕಾರ್ಜುನ ಖರ್ಗೆ ಕೂಟ ಟವೆಲ್ ಹಾಕಿದೆ ಎಂದು ವ್ಯಂಗ್ಯವಾಡಿದರು.
ನಮ್ಮ ರಾಜ್ಯದಲ್ಲಿರುವುದು ಮಾನವೀಯತೆ ಇಲ್ಲದ ಭ್ರಷ್ಟ ಸರ್ಕಾರ. ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಸೋಲುತ್ತದೆ ಎಂದು ಆ ಪಕ್ಷದ ಮುಖಂಡರೇ ಹೇಳುತ್ತಿದ್ದಾರೆ. ಇದು ಆ ಪಕ್ಷದ ಸ್ಥಿತಿ ಎಂದು ವಿಜಯೇಂದ್ರ ಟೀಕಿಸಿದರು.

