ಹೊಸ ಕಟ್ಟಡ ಬೇಡ,ದೇವರಾಜ ಮಾರುಕಟ್ಟೆ ಪುನಶ್ಚೇತನ ಮಾಡಲಿ-ಯದುವೀರ್

ಮೈಸೂರು: ಮೈಸೂರಿನ ಪಾರಂಪರಿಕ ಕಟ್ಟಡ ದೇವರಾಜ ಮಾರುಕಟ್ಟೆಗೆ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಭೇಟಿ ನೀಡಿ ಪರಿಶೀಲಿಸಿದರು.

ಪಾರಂಪರಿಕ ಕಟ್ಟಡಗಳ ಸಂರಕ್ಷಣೆ ಮಾಡುವಂತೆ ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ದೇವರಾಜ ಮಾರುಕಟ್ಟೆಗೆ ಭೇಟಿ ನೀಡಿದ ಸಂಸದರು, ವ್ಯಾಪಾರಸ್ಥರ ಜೊತೆ ಮಾತುಕತೆ ನಡೆಸಿದರು.

ಸರ್ಕಾರ ಹೊಸ ಕಟ್ಟಡ ನಿರ್ಮಾಣ ಮಾಡುವ ಬದಲು ಇದನ್ನೇ ಪುನಶ್ಚೇತನ ಮಾಡಬೇಕು. ಸರ್ಕಾರ ಈಗಾಗಲೇ ಹೊಸ ಕಟ್ಟಡ ನಿರ್ಮಾಣ ಮಾಡಲು ಅನುದಾನ ಮೀಸಲಿಟ್ಟಿದೆ. ಆ ಅನುದಾನದಲ್ಲೇ ನವೀಕರಣ ಮಾಡಲಿ ಎಂದು ಯದುವೀರ್ ಸಲಹೆ ನೀಡಿದರು.

ವ್ಯಾಪಾರಸ್ಥರು ಒಂದೊಂದು ಭಾಗವನ್ನ ಬಿಟ್ಟುಕೊಡಲು ಸಿದ್ದರಿದ್ದಾರೆ. ಬೇಗನೆ ನವೀಕರಣ ಕೆಲಸ ಕೈಗೆತ್ತಿಕೊಳ್ಳಲಿ ಎಂದು ಸಂಸದರು ತಿಳಿಸಿದರು.