ಮೈಸೂರು: ಮೈಸೂರಿನ ಶ್ರೀ ಅವಧೂತ ದತ್ತ ಪೀಠ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಮೇ.24 ರಿಂದ ಮೇ 31ರವರೆಗೆ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳ ಮಹಾಸಂಗಮವೇ ಜರುಗಲಿದೆ.
ಪರಮ ಪೂಜ್ಯ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ 84ನೇ ಜನ್ಮದಿನೋತ್ಸವ, ಶ್ರೀ ದತ್ತ ವೆಂಕಟೇಶ್ವರ ಕ್ಷೇತ್ರದ 27ನೇ ಬ್ರಹ್ಮೋತ್ಸವ ಹಾಗೂ ನಾದ ಮಂಟಪದ 28ನೇ ವಾರ್ಷಿಕೋತ್ಸವ ನಿಮಿತ್ತ ಆಶ್ರಮದಲ್ಲಿ ಹಬ್ಬದ ವಾತಾವರಣ ಮನೆಮಾಡಿದೆ.
ಮೇ 24 ರ ಭಾನುವಾರ ಬೆಳಿಗ್ಗೆ 9 ಗಂಟೆಗೆ ‘ಗಣಪತಿ ಹೋಮ’ದೊಂದಿಗೆ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಲಿವೆ. ಸಂಜೆ 5 ಗಂಟೆಗೆ ಶೇಷ ವಾಹನ ಉತ್ಸವ ಹಾಗೂ 6 ಗಂಟೆಗೆ ಬ್ರಹ್ಮೋತ್ಸವ ಮತ್ತು ಶ್ರೀಗಳ ಜನ್ಮದಿನೋತ್ಸವಕ್ಕೆ ಸುತ್ತೂರು ಮಠದ ಪೀಠಾಧೀಶರಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಅವರಿಂದ ವಿಧ್ಯುಕ್ತವಾಗಿ ಚಾಲನೆ ದೊರೆಯಲಿದೆ.
ಮೇ 25 ರಂದು ಪ್ರಖ್ಯಾತ ಕೊಳಲು ವಾದಕ ಪಂಡಿತ್ ರಾಕೇಶ್ ಚೌರಾಸಿಯಾ ಮತ್ತು ತಬಲಾ ವಾದಕ ಪಂಡಿತ್ ಅನಿಂದೋ ಚಟರ್ಜಿ ಅವರಿಂದ ಹಿಂದೂಸ್ತಾನಿ ಸಂಗೀತ ಕಚೇರಿ.
ಮೇ 26 ರಂದು ಶ್ರೀಗಳ 84ನೇ ಜನ್ಮದಿನದ ಅಂಗವಾಗಿ ಅಭಿಷೇಕ, ಲಕ್ಷ್ಮಿ ಹೋಮ, ಸಂಸ್ಕೃತ ಶಿಕ್ಷಣ ಸೇವೆ ಉದ್ಘಾಟನೆ ಹಾಗೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ.
ಮೇ 27 ಕ್ಕೆ ಶ್ರೀಗಳಿಗೆ ಪ್ರತ್ಯಕ್ಷ ಪಾದಪೂಜೆ ಮತ್ತು ವಿವಿಧ ಕ್ಷೇತ್ರಗಳ ಗಣ್ಯರಿಗೆ ದತ್ತ ಪೀಠದ ವತಿಯಿಂದ ವೇದನಿಧಿ, ಶಾಸ್ತ್ರನಿಧಿ ಮತ್ತಿತರ ಬಿರುದು ಪ್ರದಾನ
ಸಂಜೆ 6:00ಗೆ ಅನ್ನಮಯ್ಯ ಕೀರ್ತನ ನೃತ್ಯಂಜಲಿ.
ಮೇ 28 ಸಂಜೆ ದತ್ತ ವೆಂಕಟೇಶ್ವರ ಸ್ವಾಮಿಗೆ ತಿಪ್ಪೋತ್ಸವ.
ಮೇ 29 ಹಿಂದುಸ್ತಾನಿ ದ್ವಂದ್ವ ವಾದನ ಪಂಡಿತ್ ವಿಶ್ವಮೋಹನ್ ಭಟ್ (ಮೋಹನ ವೀಣೆ) ಮತ್ತು ಪಂಡಿತ್ ಸಲೀಲ್ ವಿಶ್ವ ಮೋಹನ್ ಭಟ್ (ಸಾತ್ವಿಕ ವೀಣೆ) ಕಾರ್ಯಕ್ರಮ ನಡೆಯಲಿದೆ.
ಮೇ 30 ಬೆಳಿಗ್ಗೆ 10 ಗಂಟೆಗೆ ವಿಶೇಷ ಚೇತನರಿಗೆ ಸಹಾಯಕ ಉಪಕರಣಗಳ ವಿತರಣೆ.
ಸಂಜೆ ಪಂಡಿತ್ ಸಂಜೀವ್ ಅಭ್ಯಂಕರ್ ಅವರಿಂದ ಸಂಗೀತ ಸುಧೆ.
ಮೇ 31 ವೀಣೆ ಮತ್ತು ಪಿಟೀಲು ವಾದನ ವಿದ್ವಾನ್ ಕುಮರೇಶ್ ರಾಜಗೋಪಾಲನ್ ಮತ್ತು ವಿದುಷಿ ಜಯಂತಿ ಕುಮರೇಶ್ ಅವರಿಂದ ವೀಣಾ-ವಯಲಿನ್ ಜುಗಲ್ಬಂದಿ.
ದೈನಂದಿನ ವಿಶೇಷ ಚಟುವಟಿಕೆಗಳು:
ಭಕ್ತಾದಿಗಳ ಆರೋಗ್ಯ ಮತ್ತು ಮಾನಸಿಕ ಶಾಂತಿಗಾಗಿ ಪ್ರತಿದಿನ ಬೆಳಿಗ್ಗೆ 6.30ಕ್ಕೆ ದತ್ತ ಕ್ರಿಯಾ ಯೋಗ ತರಗತಿಗಳು ಹಾಗೂ ಮಧ್ಯಾಹ್ನ 12 ಮತ್ತು ಸಂಜೆ 4 ಗಂಟೆಗೆ ಶ್ರೀಗಳೇ ಸಂಯೋಜಿಸಿರುವ ಮ್ಯೂಸಿಕ್ ಥೆರಪಿ (ಸಂಗೀತ ಚಿಕಿತ್ಸೆ) ಕಾರ್ಯಕ್ರಮಗಳು ನಾದ ಭವನದಲ್ಲಿ ನಡೆಯಲಿವೆ.
ಮೈಸೂರಿನ ಜನತೆ ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಈ ಪವಿತ್ರ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ಆಶ್ರಮದ ಪ್ರಕಟಣೆ ತಿಳಿಸಿದೆ.

