(ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ)
ಚಾಮರಾಜನಗರ: ನಗರದಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ಅಪಘಾತಗಳಿಗೆ ಎಡೆ ಮಾಡಿಕೊಡುತ್ತಿದ್ದರೂ ಶಾಲಾ, ಕಾಲೇಜು ಮಿಗಿಲಾಗಿ ಎಸ್ಪಿ ಕಚೇರಿ ಸಮೀಪವೇ ಸೂಕ್ತ ಹಂಪ್ಸ್ ಇಲ್ಲದೆ ಕಿತ್ತು ಹೋದ ಹಂಪ್ ಗಳಿಂದ ವಾಹನ ಸವಾರರ ಜೀವಕ್ಕೆ ಗ್ಯಾರಂಟಿಯೇ ಇಲ್ಲದಂತಾಗಿದೆ.
ಚಾಮರಾಜನಗರ ಜೋಡಿ ರಸ್ತೆಯಲ್ಲಿ ಪಚ್ಚಪ್ಪ ವೃತ್ತದಿಂದ ರಾಮಸಮುದ್ರ ಜೋಡಿರಸ್ತೆಯಲ್ಲಿನ ಅವೈಜ್ಞಾನಿಕ ಡಿವೈಡರ್ ಗಳಿಂದಾಗಿ ಎಲ್ಲಾದರೂ ಒಂದು ಕಡೆ ಅಪಘಾತ ನಡೆಯುತ್ತಲೆ ಇದೆ. ಇದು ಒಂದು ಕಡೆಯಾದರೆ ವಾಹನ ಸವಾರರ ವೇಗ ಹಾಗೂ ನಿರ್ಲ್ಯಕ್ಷ ಕೂಡ ಅಪಘಾತಕ್ಕೆ ಎಡೆ ಮಾಡಿದೆ.
ಚಾಮರಾಜನಗರ ಜಿಲ್ಲಾಡಳಿತ ಭವನ ಹಾಗೂ ಎಸ್ಪಿ ಕಚೇರಿ ಸಮೀಪ ಆರಂಭದಲ್ಲಿ ರಬ್ಬರ್ ಹಂಪ್ ಹಾಕಿ ವೇಗ ನಿಯಂತ್ರಣ ಮಾಡಿದರೂ ಇದೀಗ ಕಳಪೆ ಹಂಪ್ ನಿಂದಾಗಿ ಅಪಘಾತಕ್ಕೆ ಎಡೆ ಮಾಡಿಕೊಟ್ಟಂತಾಗಿದೆ. ಅಷ್ಟೆ ಅಲ್ಲ ಉಳಿದ ನಿಯಮಗಳನ್ನು ಕಟ್ಟು ನಿಟ್ಟಾಗಿ ಜಾರಿಗೆ ತರಲು ಪೊಲೀಸ್ ಇಲಾಖೆ ನಿರ್ಲ್ಯಕ್ಷ ವಹಿಸಿದೆ.
ವಾಹನ ಸವಾರರು ಬೆಳಗಿನ ಸಮಯದಲ್ಲಿ ಶಿರಸ್ತ್ರಾಣ ಧರಿಸದೆ, ಆಟೋ,ಕ್ಯಾಬ್ ಗಳಲ್ಲಿನ ಚಾಲಕರು ಸಮವಸ್ತ್ರ ಧರಿಸದೆ ವೇಗವಾಗಿ ಚಾಲನೆ ಮಾಡುವುದು ಒಂದೆಡೆಯಾದರೆ ಶಾಲಾ ಕಾಲೇಜಿನ ಸಮೀಪವೆ ವಿರುದ್ದ ದಿಕ್ಕಿನಲ್ಲಿ ವಾಹನ ಚಾಲನೆ ಮಾಡುತ್ತಿರುವುದು ಸಾವಿಗೆ ರಹದಾರಿ ನೀಡಿದಂತಾಗಿದೆ.
ಜೋಡಿರಸ್ತೆ, ಖಾಸಗಿ ಕಾಲೇಜಿನ ಮುಂಭಾಗ ಅತಿ ಹೆಚ್ಚು ಪೋಷಕರ ವಾಹನಗಳು ಅಡ್ಡಾದಿಡ್ಡಿ ಪಾರ್ಕಿಂಗ್ ಮಾಡುವುದರಿಂದ ಬೇರೆ ವಾಹನಗಳ ಸಂಚಾರಕ್ಕೆ ಅಡೆತಡೆ ಮಾಡುತ್ತಿರುವುದು ದುರ್ದೈವ.
ಈಗಾಗಲೇ ಕಾಲೇಜು ಮುಂಬಾಗ ಜನದಟ್ಟಣೆ ವಿಪರೀತ ವಾಗಿದೆ.ವಿರುದ್ದ ದಿಕ್ಕಿನಲ್ಲಿ ಬರುವ ವಾಹನವನ್ನಾಗಲಿ ಅಪ್ರಾಪ್ತ ಮಕ್ಕಳಿಂದ ವಾಹನ ಚಾಲನೆ ತಡೆಯುವ ಕೆಲಸ ಆಗುತ್ತಿಲ್ಲ. ಇಂತಹವರನ್ನ ತಡೆದಾಗ ಸವಾರರು ಪೊಲೀಸರ ಮೇಲೆ ಗಲಾಟೆ ಮಾಡುವ,ಮಾಡಿರುವ ಉದಾಹರಣೆಗಳು ಸಾಕಷ್ಟಿದೆ.
ಹಿಂದಿನ ಎಸ್ಪಿ ಕವಿತಾ ಅವರಿದ್ದಾಗ ವಿರುದ್ದ ದಿಕ್ಕಿನಲ್ಲಿ ಸಾಗುವ , ಮೇಲ್ನೊಟಕ್ಕೆ ಕಂಡ ಮೊ.ಕಾ.ನಿಯ್ದೆ ನಿಯಮಗಳನುಸಾರ ಪೊಟೊ ತೆಗೆದು ದಂಡ ಹಾಕುವ ಅರಿವು ಕಾರ್ಯಕ್ರಮ ಮಾಡಿದ್ದರು. ಜೊತೆಗೆ ತಾವೆ ರಸ್ತೆಗಿಳಿದು ಕಾರ್ಯನಿರ್ವಹಿಸುತ್ತಿದ್ದರು.
ಈಗ ಪೊಲೀಸ್ ಇಲಾಖೆ ಕಟ್ಟು ನಿಟ್ಟಿನ ಅದೇಶ ಮಾಡಲಾಗಿದ್ದರೂ ಕೆಲವು ವಾಹನ ಸವಾರರು, ಜನಪ್ರತಿನಿದಿಗಳು ಪೊಲೀಸರಿಗೆ ಹತ್ತಿರದವರ ಬಳಿ ಕರೆ ಮಾಡಿಸಿ ಬಿಡಿಸಿಕೊಂಡು ಹೊದರೆ ಕೆಲವರು ಅಷ್ಟೊ ಇಷ್ಟೊ ಕೊಟ್ಟು ರಶೀದಿ ಪಡೆಯದೆ ಹೋದ ಪ್ರಸಂಗಗಳು ಉಂಟು.
ಮೊದಲಿನ ಹಾಗೆ ಪೊಟೊ ತೆಗೆದು ದಂಡ ಹಾಕೊ ಪ್ರಕ್ರಿಯೆಗೆ ರಾಜ್ಯದ ಯಾವ್ದೊ ನ್ಯಾಯಾಲಯ ಆದೇಶ ನೀಡಿದೆ ಎಂಬ ಸಬೂಬು ಕೆಲವರ ಮನಸ್ಸಿನಲ್ಲಿ ಇರೋದ್ರಿಂದ ಇಂತ ಕಾಯಕಕ್ಕೆ ತಿಲಾಂಜಲಿ ಹೇಳಿಬಿಟ್ಟಿದ್ದಾರೆ.
ನಿಜಕ್ಕೂ ಇಂತ ಆದೇಶದ ಬಗ್ಗೆ ಕಾನೂನು ತಿಳಿದವರಿಂದ ಕೇಳಿದರೂ ಸಮರ್ಪಕ ಉತ್ತರ ಲಭ್ಯವಿರದೆ ಬೀಸೊ ದೊಣ್ಣೆಯಿಂದ ತಪ್ಪಿಸಿಕೊಂಡಂತೆ ಮಾಡೊ ಕೆಲಸದಿಂದ ಸ್ವಲ್ಪ ಮಟ್ಟಿಗೆ ನಿರಾಳರಾಗಿದ್ದಾರೆ ಎನ್ನಬಹುದು.
ಪಟ್ಟಣ ಸೇರಿದಂತೆ ಹಲವೆಡೆ ಎಗ್ಗಿಲ್ಲದೆ ನಿಯಮ ಉಲ್ಲಂಘನೆ ಆಗುತ್ತಿದ್ದರೂ ಪೊಲೀಸರು ಪ್ರಮುಖ ವೃತ್ತದ ಜಾಗದಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ.
ಇದೂವರೆಗೂ ಹಾಕಲಾದ ರಬ್ಬರ್ ಹಂಪ್ ಕಳಪೆಯಾಗಿದ್ದರಿಂದ ಬಸ್ ಅಪಘಾತವಾಗಿ ವ್ಯಕ್ತಿ ಮರಣ ಹೊಂದಿದ್ದರಿಂದ ಬೆಂಡರವಾಡಿ ಕೆರೆ ಸಮೀಪದ ಹಂಪ್ ಕಿತ್ತೊಗೆಯಲಾಗಿದೆ.
ಅಷ್ಟೆ ಅಲ್ಲದೆ ಪಟ್ಟಣದ ಪ್ರಮುಖ ಸ್ಥಳದಲ್ಲೆ ಹಂಪ್ಸ್ ಕಿತ್ತೊಗೆದಿರುವುದರಿಂದ ಅಪಘಾತದ ಸ್ಥಳವಾಗಿ ಪರಿಣಮಿಸಿದೆ.
ಪೊಲೀಸರು ಹೆಲ್ಮೆಟ್ ಹಾಕದಿದ್ದರೆ ಮಾತ್ರ ದಂಡ ಹಾಕುತ್ತಿರೊದ್ರಿಂದ ಎಷ್ಟೊ ವಾಹನಗಳಿಗೆ ವಿಮೆ ಇಲ್ಲದೆ ಅನುನತಿ ಪತ್ರವು ಇಲ್ಲದರ ಬಗ್ಗೆ ಬಹುತೇಕ ಪೊಲೀಸರು ತಪಾಸಣೆ ಗೋಜಲಿಗೆ ಹೋಗದಿರುವುದು ವಿಪರ್ಯಾಸ.
ಸಿಕ್ಕ ಸಿಕ್ಕವರಿಗೆ ದಂಡ ಹಾಕಿ ವಾಹನ ಸವಾರರು ಪೊಲೀಸರ ಸಂಘರ್ಷ ತಪ್ಪಿಸಲು ಕ್ಯಾಮರಾ ಚಾಲಿತದಿಂದ ದಂಡ ಹಾಕೊ ಪ್ರಕ್ರಿಯೆ ತ್ವರಿತವಾಗಿ ಜಾರಿಗೆ ತಂದಾಗ ಮಾತ್ರ ನಿಯಮಪಾಲನೆಗೆ ಸ್ವಲ್ಪಮಟ್ಟಿಗೆ ಅವಕಾಶವಾಗಲಿದೆ ಇಲ್ಲವಾದರೆ ನಿಯಮ ಪಾಲನೆ ಉಲ್ಲಂಘನೆಯಲ್ಲೂ ಒಬ್ಬರಿಗೊಂದು ತರ ಆಗಲಿದೆ.
ದಕ್ಷಿಣ ಪೊಲೀಸ್ ಮಹಾನಿರ್ದೇಶಕರು ಬರೊ ದಾರಿಯಲ್ಲಿ ಈ ಎಲ್ಲ ನಿಯಮ ಪರಿಶೀಲನೆ ಮಾಡುತ್ತ ಬಂದರೆ ಸತ್ಯಾಂಶ ಗೋಚರವಾಗಲಿದೆ.
ಮಿಗಿಲಾಗಿ ರಾಜ್ಯದ ಹಿರಿಯ ಪೊಲೀಸ್ ಮಹಾನಿರ್ದೇಶಕರು ಅಗತ್ಯ ಕಾನೂನು ನಿಯಮದ ಬಗ್ಗೆ ಸೂಕ್ತ ಮಾರ್ಗದರ್ಶನ ನಿರ್ದೇಶನ ನೀಡಬೇಕಾದ ಅಗತ್ಯವಿದೆ ಎಂದರೆ ತಪ್ಪಾಗಲಾರದು.

