ಚಾಮರಾಜನಗರ: ಇ ಖಾತಾ ಮಾಡಿಸಲು ೨೫ ಸಾವಿರ ಲಂಚ ಪೀಕುತ್ತಿದ್ದವರನ್ನ ಲೋಕಾಯುಕ್ತರು ಬಲೆಗೆ ಕೆಡವಿದ್ದಾರೆ.
ಲೋಕಾಯುಕ್ತ ಚಾ.ನಗರದ ತನಿಖಾದಿಕಾರಿ ಲೋಹಿತ್ ಅವರ ನೇತೃತ್ವದಲ್ಲಿ ಡಿವೈಎಸ್ಪಿ ಗಜೇಂದ್ರಪ್ರಸಾದ್ ಅವರ ಮಾರ್ಗದರ್ಶನದಲ್ಲಿ ನಗರಸಭೆ ಕಚೇರಿಗೆ ದಾಳಿ ನಡೆಸಿ ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ಇಬ್ಬರು ಅಧಿಕಾರಿಗಳು ಹಾಗೂ ಮದ್ಯವರ್ತಿಯೊಬ್ಬರನ್ನ ವಶಕ್ಕೆ ಪಡೆದುಕೊಂಡಿದ್ದಾರೆ
ನಗರಸಬೆಯ ಅದಿಕಾರಿಗಳಾದ ಆರ್‌ಒ ಹೇಮಂತ್ ಕುಮಾರ್ ಹಾಗೂ ಆರ್‌ಐ ಶಕೀಲ್ ಅಹಮ್ಮದ್ ಮತ್ತು ಮದ್ಯವರ್ತಿ ಎನ್ನಲಾದ ಹಬೀಬ್ ಲೋಕಾ ಬಲೆಗೆ ಬಿದ್ದಿದ್ದಾರೆ ಎಂದು ಹೇಳಲಾಗುತ್ತಿದ್ದು, ಸದ್ಯ ನಗರಸಭೆ ಕಚೇರಿಯಲ್ಲೇ ತನಿಖೆ ನಡೆಯುತ್ತಿದೆ.
ಈ ಖಾತಾ ಸಂಬಂದಿ ದೂರುದಾರ ನಾಗರಾಜು ಎಂಬುವರು ನೀಡಿದ ದೂರಿನ ಮೇರೆಗೆ ಲಂಚದ ಹಣ ೨೫ ಸಾವಿರ ರೂ ಪಡೆಯುತ್ತಿದ್ದಾಗ ಬ್ರೋಕರ್ ಸಮೇತ ಅದಿಕಾರಿಗಳು ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿದೆ.
ಚಾ.ನಗರ ಲೋಕಾಯುಕ್ತರು ಸಿಬ್ಬಂದಿ ವರ್ಗದವರು ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.

