ಇಬ್ಬರು ಪೊಲೀಸರ ಅಮಾನತು ಮಾಡಿದ ಎಸ್ಪಿ!

(ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ)

ಚಾಮರಾಜನಗರ: ಜೂಜಾಟದಲ್ಲಿ ತೊಡಗಿ ಸಿಕ್ಕಿಬಿದ್ದ ಹಿನ್ನೆಲೆಯಲ್ಲಿ ಇಬ್ಬರು ಪೊಲೀಸರನ್ನ ಚಾಮರಾಜ ನಗರ ಎಸ್ಪಿ ಮುತ್ತುರಾಜು ಅಮಾನತು ಮಾಡಿದ್ದಾರೆ

ಚಾಮರಾಜನಗರ ಮಹಿಳಾ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರೆನ್ನಲಾದ ಮಲ್ಲಿಕಾರ್ಜುನ ಹಾಗೂ ಸಶಸ್ತ್ರಮಿಸಲು ಪಡೆಯ ನಾಗೇಶ್ ಎಂಬುವರು ಅಮಾನತುಗೊಂಡ ಸಿಬ್ಬಂದಿಗಳು.

ಖಚಿತ ಮಾಹಿತಿ ಆಧರಿಸಿ,ಕಳೆದ ರಾತ್ರಿ ಸಾಮೂಹಿಕ ಜೂಜಾಟದಲ್ಲಿ ತೊಡಗಿದ್ದ ಗುಂಪಿನ ಮೇಲೆ ಪೊಲೀಸರು ದಾಳಿ ನಡೆಸಿದಾಗ ಈ ಇಬ್ಬರು ಪೊಲೀಸರು ಸಿಕ್ಕಿಬಿಧ್ದಿದ್ದರು ಎಂದು ತಿಳಿದುಬಂದಿದೆ.

ಈ ಹಿಂದೆಯೂ ಎಸ್ಪಿ ದಿವ್ಯ ಸಾರಾ ಥಾಮಸ್ ಅವದಿಯಲ್ಲೂ ಸಶಸ್ತ್ರಮೀಸಲು ಪಡೆಯ ಕೆಲ ಸಿಬ್ಬಂದಿಗಳು ಸಿಕ್ಕಿ ಅಮಾನತ್ತಾಗಿದ್ದರು.

ಆದರೆ ಅಲ್ಲಲ್ಲಿ ದೂರು ಕೇಳಿ ಬಂದರೂ ತಪ್ಪಿಸಿಕೊಂಡಿದ್ದ ಸಿಬ್ಬಂದಿ ಈಗ ಸಿಕ್ಕಿ ಬಿದ್ದು ಅಮಾನತುಗೊಂಡಿದ್ದಾರೆ.