ಮೈಸೂರು:ಮೈಸೂರಿನ ಸರ್ದಾರ್ ವಲ್ಲಭಭಾಯಿ ಪಟೇಲ್ ನಗರ ಬಡಾವಣೆಗೆ ಶೀಘ್ರದಲ್ಲೇ ಕಾವೇರಿ ಸಿಹಿ ನೀರಿನ ಸಂಪರ್ಕ ಕಲ್ಪಿಸಲಾಗುವುದು ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಭರವಸೆ ನೀಡಿದ್ದಾರೆ.
ಮೂಲಸೌಕರ್ಯಗಳ ಕೊರತೆ ಪರಿಶೀಲಿಸಲು ಬಡಾವಣೆಗೆ ಭೇಟಿ ನೀಡಿದ ಯದುವೀರ್ ಕಾವೇರಿ ನೀರಿನ ಕೊರತೆ, ಹದಗೆಟ್ಟ ರಸ್ತೆಗಳು ಹಾಗೂ ತಿಪ್ಪಯ್ಯನ ಕೆರೆಗೆ ಕಲುಷಿತ ನೀರು ಸೇರುತ್ತಿರುವುದನ್ನು ಖುದ್ದಾಗಿ ಕಂಡು ಬೇಸರ ಪಟ್ಟರು.
ಶೀಘ್ರದಲ್ಲೇ ತಿಪ್ಪಯ್ಯನ ಕೆರೆಗೆ ‘ನಗರ ಒನ್’ ಯೋಜನೆಯನ್ನು ಅನುಷ್ಠಾನಗೊಳಿಸಿ ಅಭಿವೃದ್ಧಿಪಡಿಸಲಾಗುವುದು ಪೂರ್ವ ವಲಯದ ಬಡಾವಣೆಗಳಿಗೆ ಆದಷ್ಟು ಬೇಗ ಕಾವೇರಿ ನೀರು ತರಲಾಗುವುದು ಎಂದು ತಿಳಿಸಿದರು.
ರಸ್ತೆಗಳ ಡಾಂಬರೀಕರಣಕ್ಕಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಿ ಬೇಕಾದ ಅನುದಾನವನ್ನು ಬಡಾವಣೆಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಯದುವೀರ್ ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಮೈಸೂರು ನಗರ ಅಧ್ಯಕ್ಷ ಎಲ್. ನಾಗೇಂದ್ರ, ನಗರ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಲೋಹಿತ್ ದೊರೆಸ್ವಾಮಿ, ಚಾಮುಂಡೇಶ್ವರಿ ಕ್ಷೇತ್ರದ ಅಧ್ಯಕ್ಷ ಪೈಟಿ ರವಿ, ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹೇಮಂತ್ ಕುಮಾರ್ ಗೌಡ, ಸಮಾನ ಮಸ್ಕರ ವೇದಿಕೆ ಅಧ್ಯಕ್ಷ ಥಾಮಸ್, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆರೆಹಳ್ಳಿ ಬಿ. ದೊರೆಸ್ವಾಮಿ ಹಾಗೂ ಸಮಾಜ ಸೇವಕರಾದ ಶಿವಸ್ವಾಮಿ, ಶಿವಬಸಪ್ಪ, ಮಾದಪ್ಪ, ದೇವಪ್ಪಜಿ, ಶ್ರೀಕಂಠ ಮೂರ್ತಿ, ಸ್ವಾಮಿ, ಮಹೇಶ್, ಮಾದಪ್ಪ, ಪಿಎಂ ಮಹದೇವಸ್ವಾಮಿ, ಗಂಗಾಧರ, ಮುದ್ದು ಬಸವಣ್ಣ, ದೇವರಾಜಪ್ಪ ಮತ್ತಿತರರು ಹಾಜರಿದ್ದರು.

