ತಂದೆಯಿಂದಲೇ ಮಗನ ಕೊಲೆ:ತಂದೆ ಅರೆಸ್ಟ್

ಚಾಮರಾಜನಗರ: ಮದುವೆ ಮಾಡಬೇಕು ಹಾಗೂ ಆಸ್ತಿ ಕೊಡಬೇಕೆಂದು ಕುಡಿದು ಜಗಳ
ಮಾಡುತ್ತಿದ್ದ ಮಗನನ್ನು ತಂದೆಯೇ ಕೊಲೆ ಮಾಡಿದ್ದು ಈಗ ಕಂಬಿ ಎಣಿಸುವಂತಾಗಿದೆ.

ಯರಗನಹಳ್ಳಿ ಗ್ರಾಮದ ಸಿದ್ದೇಗೌಡ(55)ಮಗನನ್ನು ಕೊಲೆ ಮಾಡಿದ ಆರೋಪಿ.ಸಿದ್ದರಾಜು ಕೊಲೆಯಾದ ಮಗ

ಚಾಮರಾಜನಗರ ಜಿಲ್ಲೆ, ತೆರಕಣಾಂಬಿ ಪೊಲೀಸ್ ಠಾಣಾ ವ್ಯಾಪ್ತಿಯ ಯರಗನಹಳ್ಳಿ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟ ಸುದ್ದಿ ತಿಳಿದು ತೆರಕಣಾಂಬಿ ಪೊಲೀಸ್ ಠಾಣಾ ಆರಕ್ಷಕ ಉಪ-ನಿರೀಕ್ಷಕರಾದ ಮಹೇಶ್.ಕೆ.ಎಂ ಅವರು ಸಿಬ್ಬಂದಿ ಜತೆ ಸ್ಥಳಕ್ಕೆ ಭೇಟಿ ನೀಡಿದಾಗ ಸಿದ್ದರಾಜು (32) ಮೃತಪಟ್ಟಿರುವುದು ಕಂಡು ಬಂದಿದೆ.

ಈ ಬಗ್ಗೆ ವಿಚಾರ ಮಾಡಿದಾಗ ಸಿದ್ದೇಗೌಡ ಪ್ರತಿದಿನ ಕುಡಿದು ಬಂದು ತಂದೆ ಸಿದ್ದೇಗೌಡ, ತಾಯಿ ಮಹದೇವಮ್ಮ ಅವರೊಂದಿಗೆ ಗಲಾಟೆ ಮಾಡುವುದು. ಜಗಳ ತೆಗೆಯುವುದು ಮಾಡುತ್ತಿದ್ದುದು ಗೊತ್ತಾಗಿದೆ.

11 ರಂದು ರಾತ್ರಿ ಕುಡಿದು ಬಂದು ನನಗೆ ಮದುವೆ ಮಾಡಿ, ಆಸ್ತಿ ಕೊಡಿ ಎಂದು ಖ್ಯಾತೆ ತೆಗೆದಿದ್ದಾನೆ,ಜಗಳ ತೀವ್ರವಾದಾಗ ತಂದೆ ಸಿದ್ದೇಗೌಡ, ಮಗ ಸಿದ್ದರಾಜುನನ್ನು ತಳ್ಳಿ, ಕೆಳಕ್ಕೆ ಬೀಳಿಸಿ,ಕೋಪದ ಭರದಲ್ಲಿ ಸಿಮೆಂಟ್ ಇಟ್ಟಿಗೆಯಿಂದ ಹೊಡೆದಿದ್ದಾನೆ.

ಹಾಗಾಗಿ ತೀವ್ರ ರಕ್ತಸ್ರಾವವಾಗಿ ಸಿದ್ದರಾಜು ಸ್ಥಳದಲ್ಲಿ ಮೃತಪಟ್ಟಿದ್ದಾನೆ, ಈ ಸಂಬಂಧ ಮೃತನ ತಾಯಿ ಮಹದೇವಮ್ಮ ನೀಡಿದ ದೂರಿನ ಮೇರೆಗೆ ತೆರಕಣಾಂಬಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು.

ಈಗ ಆರೋಪಿ ಸಿದ್ದೇಗೌಡನನ್ನು ಪೊಲೀಸರು ಬಂಧಿಸಿ,ಕಾನೂನು ಕ್ರಮ ಕೈಗೊಂಡಿದ್ದಾರೆ.