ಮೈಸೂರು: ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯ ಜಿಲ್ಲೆಯಲ್ಲಿ ಚುರುಕುಗೊಂಡಿದೆ.
ಅಪರ ಜಿಲ್ಲಾಧಿಕಾರಿ ಆರ್.ಐಶ್ವರ್ಯಾ ಅವರು ಹೆಚ್.ಡಿ.ಕೋಟೆಯ ವಿವಿಧ ಗ್ರಾಮಗಳ ಮನೆ ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಹೆಚ್.ಡಿ.ಕೋಟೆಯ ಸರಗೂರು, ಪುರದಕಟ್ಟೆ ಹಾಡಿ, ಹೊಮ್ಮರಗಳ್ಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವುದರೊಂದಿಗೆ ಖುದ್ದು ಬಿ.ಎಲ್ ಒ ಗಳೊಂದಿಗೆ ಕೆಲವು ಮನೆಗಳಿಗೆ ಎನ್ಯೂಮರೇಷನ್ ಫಾರಂ ವಿತರಣೆ ಮಾಡಿದರು.
ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿ.ಎಲ್.ಒ.) ಜುಲೈ 29 ರವರೆಗೆ ಮನೆ-ಮನೆಗೆ ಭೇಟಿ ನೀಡಿ ಮತದಾರರಿಗೆ ಎನ್ಯೂಮರೇಷನ್ ನಮೂನೆಗಳನ್ನು ವಿತರಿಸುತ್ತಿದ್ದಾರೆ. ಬಿ.ಎಲ್.ಒ.ಗಳು ಭೇಟಿ ನೀಡಿದ ಸಂದರ್ಭದಲ್ಲಿ ಮತದಾರರು ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ, ದಾಖಲೆಗಳೊಂದಿಗೆ ನಮೂನೆಗಳನ್ನು ಹಿಂತಿರುಗಿಸಿ ಸಹಕರಿಸಬೇಕು ಎಂದು ಆರ್.ಐಶ್ವರ್ಯ ಮನವಿ ಮಾಡಿದರು.

