ಮೈಸೂರು: ಮೈಸೂರಿನ ಕುಕ್ಕರಹಳ್ಳಿ ಕೆರೆಯಲ್ಲಿ ಒಂದು ಅದ್ಭುತ ಜೀವ ಬದುಕುತ್ತಿದೆ ಎಂಬ ಹೇಳಿಕೆಯ ವಿಡಿಯೊ ವೈರಲ್ ಆಗಿದ್ದು,ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಕುಕ್ಕರಹಳ್ಳಿ ಕೆರೆಯ ಕೆಸರಿನಲ್ಲಿ ಒಂದು ಅದ್ಭುತ ಜೀವ ಬದುಕುತ್ತಿದೆ ಎಂಬ ಶೀರ್ಷಿಕೆಯೊಂದಿಗೆ ಹರಿದಾಡುತ್ತಿರುವ ವಿಡಿಯೋದಲ್ಲಿ ಕಂಡುಬರುವ ಜೀವಿ ಬಗ್ಗೆ ಊಹಾಪೋಹಗಳು ಕೇಳಿಬರುತ್ತಿದೆ.
ವಿಡಿಯೋದಲ್ಲಿ ನಿಖರವಾಗಿ ಯಾವ ಜೀವಿ ಕಾಣಿಸಿಕೊಂಡಿದೆ ಎಂಬ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಇಲ್ಲ. ಈ ವಿಡಿಯೋ ಮೈಸೂರಿನ ಜನತೆಯಲ್ಲಿ ತೀವ್ರ ಕುತೂಹಲ ಹುಟ್ಟಿಸಿರೋದಂತೂ ಸತ್ಯ.
ಕೆರೆಯ ಪರಿಸರ ಮತ್ತು ಅಲ್ಲಿನ ಜೀವವೈವಿಧ್ಯತೆಯ ಕುರಿತು ಅರಣ್ಯ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕೂಡಾ ಇನ್ನೂ ಅಧಿಕೃತ ಮಾಹಿತಿ ನೀಡಿಲ್ಲ.
ಕುಕ್ಕರಹಳ್ಳಿ ಕೆರೆ ಮೈಸೂರಿನ ಪ್ರಮುಖ ಜೀವವೈವಿಧ್ಯ ತಾಣವಾಗಿದ್ದು, ಇಲ್ಲಿ ವಿವಿಧ ಬಗೆಯ ಪಕ್ಷಿಗಳು ಮತ್ತು ಜಲಚರಗಳು ಕಂಡುಬರುತ್ತವೆ.ಹಾಗಾಗಿ ಯಾವುದೊ ವುಚಿತ್ರ ಜೀವಿ ಇಲ್ಲಿ ಬದುಕುತ್ತಿದ್ದು ಆಕಸ್ಮಿಕವಾಗಿ ಕಾಣಿಸಿಕೊಂಡಿರಬಹುದು.
ಒಟ್ಟರೆ ಇದೆಲ್ಲದಕ್ಕೂ ಸಂಬಂಧಪಟ್ಟ ಅಧಿಕಾರಿಗಳು ಉತ್ತರ ನೀಡಬೇಕಿದೆ.

