ಮೈಸೂರು: ನಾಡಹಬ್ಬ ಮೈಸೂರು ದಸರಾ 2026ರ ಪ್ರಯುಕ್ತ ಅರಮನೆ ಆವರಣದಲ್ಲಿ ಬೀಡುಬಿಟ್ಟಿರುವ ಗಜಪಡೆಯ ತೂಕ ಪರೀಕ್ಷೆ ಯಶಸ್ವಿಯಾಗಿ ನಡೆಯಿತು.
ನಗರದ ಧನ್ವಂತರಿ ರಸ್ತೆಯಲ್ಲಿರುವ ಸಾಯಿರಾಮ್ ತೂಕ ಕೇಂದ್ರದಲ್ಲಿ ಬೆಳಗ್ಗೆ ಆನೆಗಳ ತೂಕ ಅಳತೆ ಮಾಡಲಾಯಿತು. ಈ ವೇಳೆ ಅರಣ್ಯ ಇಲಾಖೆಯ ಅಧಿಕಾರಿಗಳು, ಪಶುವೈದ್ಯರು ಹಾಗೂ ಮಾವುತರು ಉಪಸ್ಥಿತರಿದ್ದರು.

ತೂಕ ಪರೀಕ್ಷೆಯಲ್ಲಿ ಶ್ರೀಕಾಂತ 5790 ಕೆಜಿ ತೂಕದೊಂದಿಗೆ ಅತಿ ಹೆಚ್ಚು ತೂಕ ಹೊಂದಿರುವ ಆನೆಯಾಗಿ ಹೊರಹೊಮ್ಮಿದೆ. ಕಾವೇರಿ 3075 ಕೆಜಿ ತೂಕದೊಂದಿಗೆ ಅತಿ ಕಡಿಮೆ ತೂಕ ಹೊಂದಿದೆ.
ತೂಕದ ವಿವರ:
ಶ್ರೀಕಾಂತ – 5790 ಕೆಜಿ
ಏಕಲವ್ಯ – 5600 ಕೆಜಿ
ಧನಂಜಯ – 5530 ಕೆಜಿ
ಮಹೇಂದ್ರ – 5490 ಕೆಜಿ
ಪ್ರಶಾಂತ – 5205 ಕೆಜಿ
ಗೋಪಿ – 5170 ಕೆಜಿ
ಶ್ರೀರಾಮ – 4820 ಕೆಜಿ
ಲಕ್ಷ್ಮಿ – 3990 ಕೆಜಿ
ಕಾವೇರಿ – 3075 ಕೆಜಿ
ಎಲ್ಲಾ ಆನೆಗಳು ಆರೋಗ್ಯವಾಗಿದ್ದು, ದಸರಾ ಜಂಬೂ ಸವಾರಿಗೆ ಸಜ್ಜಾಗಿವೆ ಎಂದು ಅರಣ್ಯ ಅಧಿಕಾರಿ ಪ್ರಭುಗೌಡ ತಿಳಿಸಿದರು.

