ಮೈಸೂರು: ಹಿರಿಯ ನಿರ್ದೇಶಕರಾದ ಓಂಸಾಯಿಪ್ರಕಾಶ್ ಅವರ ನಿರ್ದೇಶನವಿರುವ ಕಾಮನ್ ಮ್ಯಾನ್ ಸಿನಿಮಾ ಇದೇ ಸೆ.25 ರಂದು ತೆರೆಗೆ ಬರಲಿದೆ.
ನರಸಿಂಹಮೂರ್ತಿ ಯವರು ದೊಡ್ಡ ಮಟ್ಟದಲ್ಲಿ ಈ ಸಿನಿಮಾವನ್ನು ನಿರ್ಮಿಸಿ, ಕಥೆ ಬರೆದು ಒಂದು ಮುಖ್ಯ ಪಾತ್ರದಲ್ಲಿ ಕೂಡ ಅಭಿನಯಿಸಿರುವುದು ವಿಶೇಷ.
ಕಾಮನ್ ಮ್ಯಾನ್ ಚಿತ್ರದ ಕುರಿತು ಮೈಸೂರು ಪತ್ರಕರ್ತರ ಭವನದಲ್ಲಿ ಚಿತ್ರತಂಡ ಮಾಹಿತಿ ಹಂಚಿಕೊಂಡಿತು.
ಕೆರೆಬೇಟೆ ಖ್ಯಾತಿಯ ಗೌರಿಶಂಕರ್ ಎಸ್.ಆರ್.ಜಿ ನಾಯಕ ನಟ, ಸೋನಾಲಡ್ವ ಹಾಗೂ ಸ್ಯಾಬಿ ಸೂರಿ ನಾಯಕಿಯರಾಗಿ ಅಭಿನಯಿಸಿದ್ದಾರೆ.
ಚಿತ್ರದ ಶಿರ್ಷೀಕೆಯೇ ತುಂಬ ಆಕರ್ಷಕವಾಗಿದೆ.ಏನಿದು ಕಾಮನ್ ಮ್ಯಾನ್ ಎಂದುಕೊಳ್ಳುತ್ತಾ ಕುತೂಹಲ ಕೆರಳಿಸುತ್ತದೆ.
ಈ ಚಿತ್ರದ ಒಟ್ಟಾರೆ ಹಿನ್ನಲೆ, ರಾಜಕೀಯ ವ್ಯೆವಸ್ಥೆ, ದೇಶದಲ್ಲಿ ಆಗುತ್ತಿರುವ ಬದಲಾವಣೆಗಳು, ಹಾಗೂ ಪ್ರಸ್ತುತ ರಾಜಕೀಯ ಪರಿಸ್ಥಿತಿಯನ್ನ ನೋಡಿದಾಗ ಕಾಮನ್ ಮ್ಯಾನ್ ಸಿನಿಮಾ ಈಗಿನ ಸಂದರ್ಭಕ್ಕೆ ಬಹಳ ಪ್ರಸ್ತುತವಾಗಿರುವ ಸಿನಿಮ ಎಂದು ಚಿತ್ರ ತಂಡದವರು ಹೇಳಿದರು
ಸಿನಿಮಾದಲ್ಲಿ 4 ಹಾಡುಗಳಿದ್ದು ಬೆಂಗಳೂರು ಸುತ್ತಮುತ್ತ ಮತ್ತು ಸ್ಟೂಡಿಯೋ ಸೆಟ್‌ನಲ್ಲಿ ಚಿತ್ರೀಕರಣ ಮಾಡಲಾಗಿದೆ, ಚಿತ್ರದಲ್ಲಿ 50 ಕ್ಕೂ ಹೆಚ್ಚು ಹಿರಿಯ ಕಲಾವಿದರು ಅಭಿನಹಿಸಿರುವುದು ವಿಶೇಷ ಹಾಗೂ ಕನ್ನಡ ಚಿತ್ರರಂಗದಲ್ಲಿ ಅಪರೂಪದ ದಾಖಲೆ ಎನಿಸಲಿದೆ,
ಕಾಮನ್ ಮ್ಯಾನ್ ಚಿತ್ರವು ಇದೆ ಸೆಪ್ಟೆಂಬರ್ 25 ರಂದು ರಾಜ್ಯಾದಂತ ಬಿಡುಗಡೆಯಾಗಲಿದೆ
ಕಾಮನ್ ಮ್ಯಾನ್ ಚಿತ್ರವು
ಸುರಭಿ ಫಿಲಂಸ್ ಬ್ಯಾನರ್ ಅಡಿ ಸಿದ್ದವಾಗಿದೆ
ಕಥೆ – ನಿರ್ಮಾಪಕರು ಡಾ| ಎನ್. ನರಸಿಂಹಮೂರ್ತಿ
ಚಿತ್ರಕಥೆ – ನಿರ್ದೇಶಕರು:ಓಂ ಸಾಯಿಪ್ರಕಾಶ್
ಛಾಯಾಗ್ರಹಣ :ಜೆ.ಜಿ. ಕೃಷ್ಣ, ಜೆ.ಕೆ. ದೀಪಕ್ ಕುಮಾರ್
ಸಂಗೀತ :ವಿನಯ್ ಚಂದ್ರ
ಸಾಹಿತ್ಯ : ಡಾ|| ವಿ.ನಾಗೇಂದ್ರಪ್ರಸಾದ್, ಸಾಯಿಸರ್ವೇಶ್
ಸಂಭಾಷಣೆ : ಶೈಲೇಶ್‌ಕುಮಾರ್
ಸಂಕಲನ :ಎಮ್. ಮುನಿರಾಜು
ಸಾಹಸ : ಥ್ರಿಲ್ಲರ್ ಮಂಜು, ಕೌರವ ವೆಂಕಟೇಶ್
ನೃತ್ಯ ಸಂಯೋಜನೆ : ಮದನ್‌ಹರಣಿ, ಮುರುಳಿ, ಮೋಹನ್
ಗಾಯಕರು : ಕೈಲಾಶ್ ಖೇರ್, ಬಾಬಾ ಸೆಹಗಲ್, ಜಾವೇದ್ ಅಲಿ, ಚೈತ್ರಾ ಜೆ ಆಚಾರ್, ಶೃತಿ ಪ್ರಹ್ಲಾದ್, ಅಂಕಿತಾ ಕುಂಡು ವಿನಯ್ ಚಂದ್ರ
ಸಹ ನಿರ್ದೇಶಕರು : ಶಶಿಕಿರಣ್, ರಾಮಚಂದ್ರ ಕೆ.ಎಸ್.
ಕಲೆ : ಬಾಬುಖಾನ್.

