ಮೈಸೂರು ಅರಮನೆ ಕಂಡು ಬೆರಗಾದ ನಟಿ ಕಾಜಲ್ ಅಗರ್ವಾಲ್

ಮೈಸೂರು: ದಕ್ಷಿಣ ಭಾರತದ ಖ್ಯಾತ ನಟಿ ಕಾಜಲ್ ಅಗರ್ವಾಲ್ ಮೈಸೂರಿನ ವಿಶ್ವವಿಖ್ಯಾತ ಅರಮನೆಗೆ ಭೇಟಿ ನೀಡಿ ಅರಮನೆಯ ವೈಭವ ಬೆರಗಿನಿಂದ ಕಣ್ತುಂಬಿಕೊಂಡರು.

ಅರಮನೆಯ ವಿವಿಧ ಭಾಗಗಳನ್ನು ವೀಕ್ಷಿಸಿದ ಅವರು, ಭವ್ಯ ವಾಸ್ತುಶಿಲ್ಪ, ಕಲಾತ್ಮಕ ವಿನ್ಯಾಸ ಮತ್ತು ಐತಿಹಾಸಿಕ ಹಿನ್ನೆಲೆಯನ್ನು ಆಸಕ್ತಿಯಿಂದ ವೀಕ್ಷಿಸಿ, ದರ್ಬಾರ್ ಹಾಲ್ ಭವ್ಯತೆ ಮತ್ತು ಅಲಂಕಾರ ನೋಡಿ ಮನಸೋತರು.

ಮೈಸೂರು ಅರಮನೆ ಭಾರತೀಯ ರಾಜಮನೆತನದ ಪರಂಪರೆ ಮತ್ತು ವಾಸ್ತುಶಿಲ್ಪದ ಅದ್ಭುತ ಪ್ರತೀಕವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಕಾಜಲ್ ಅಗರ್ವಾಲ್, ಅರಮನೆ ಆವರಣದಲ್ಲಿ ಕೆಲಕಾಲ ಕಳೆದು ಖುಷಿ ಪಟ್ಟರು