ದಸರಾಕ್ಕಾಗಿ ಸಿಎಂ, ಗಣ್ಯರಿಗೆ ಪಂಚಲೋಹ ವಿಗ್ರಹ ಸಿದ್ದಮಾಡಿದ ಶಿಲ್ಪಿ ರಾಜೇಶ್ !

ಮೈಸೂರು: ನಾಡಹಬ್ಬ ದಸರಾ ಜಂಬೂಸವಾರಿ ದಿನದಂದು ಮೈಸೂರಿನ ಗೌರಿಶಂಕರ ನಗರದ ಖ್ಯಾತ ಶಿಲ್ಪಿ ರಾಜೇಶ್ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಇತರ ಗಣ್ಯರಿಗೆ ಉಡುಗೊರೆ ನೀಡಲು ಪಂಚಲೋಹದ ವಿಶೇಷ ವಿಗ್ರಹಗಳನ್ನು ಸಿದ್ದಪಡಿಸಿದ್ದಾರೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪಂಚಲೋಹದಿಂದ ಕೆತ್ತನೆ ಮಾಡಲಾದ ಗಂಗಾಧರ ಅಜ್ಜಯ್ಯನ ವಿಗ್ರಹ, ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರಿಗೆ ಪಂಚಲೋಹದ ಬುದ್ಧನ ವಿಗ್ರಹ, ಸಚಿವ ಶಿವರಾಜ್ ತಂಗಡಗಿ ಅವರಿಗೆ ಒಂದು ವಿಶೇಷ ಉಡುಗೊರೆಯನ್ನು ಸಿದ್ಧಪಡಿಸಿಟ್ಟಿದ್ದಾರೆ.

ಮೈಸೂರಿನ ಗೌರಿಶಂಕರ ನಗರದ ಶಿಲ್ಪಿ ರಾಜೇಶ್ ಅವರು ಈ ಎಲ್ಲಾ ವಿಗ್ರಹಗಳನ್ನು ಅತ್ಯಂತ ಆಕರ್ಷಕವಾಗಿ ಪಂಚಲೋಹದಲ್ಲಿ ಕೆತ್ತನೆ ಮಾಡಿ ಸಿದ್ಧಗೊಳಿಸಿದ್ದಾರೆ.