ಮೈಸೂರು, ಅ. 22- ಜಂಬೂಸವಾರಿ ಮೆರವಣಿಗೆ ತಾಲೀಮು ವೇಳೆ ಅಶ್ವಾರೋಹಿ ಪಡೆಯ ಸಿಬ್ಬಂದಿ ಕೆಳಗೆ ಬಿದ್ದ ಘಟನೆ ಗುರುವಾರ ನಡೆದಿದೆ.
ವಿಶ್ವವಿಖ್ಯಾತ ಮೈಸೂರು ದಸರಾ ಆಕರ್ಷಣೆಯ ಕೇಂದ್ರಬಿಂದುವಾಗಿರುವ ಜಂಬೂಸವಾರಿ ಮೆರವಣಿಗೆ.
ಜಂಬೂಸವಾರಿ ಮೆರವಣಿಗೆಗಾಗಿ ಗುರುವಾರ ಬೆಳಗ್ಗೆ ಮೈಸೂರು ಅರಮನೆ ಆವರಣದಲ್ಲಿ ರಿಹರ್ಸಲ್ ನಡೆಸಲಾಗುತ್ತಿತ್ತು.
ಜಂಬೂ ಸವಾರಿ ರಿಹರ್ಸಲ್ ನಲ್ಲಿ ಗಜಪಡೆ, ಅಶ್ವಾರೋಹಿ ದಳ, ಶಸ್ತ್ರ ಸಜ್ಜಿತ ಪೆÇಲೀಸರು, ಪೆÇಲೀಸ್ ಬ್ಯಾಂಡ್ ತಂಡದಿಂದ ಏಕ ಕಾಲದಲ್ಲಿ ತಾಲೀಮು ನಡೆಸಲಾಗಿತ್ತು.
ರಿಹರ್ಸಲ್ ವೇಳೆ ಅಶ್ವಗಳು ವಿಚಲಿತಗೊಂಡಿವೆ. ಅಶ್ವಾರೋಹಿ ಪಡೆಯ ಕೆಲವು ಅಶ್ವಗಳು ಗಜಪಡೆ ಕಂಡು ಗಾಬರಿಯಾಗಿವೆ. ವಿಚಲಿತಕೊಂಡ ಕುದುರೆ ಹಿಮ್ಮುಖವಾಗಿ ಚಲಿಸಿವೆ. ಕುದುರೆಗಳನ್ನು ನಿಯಂತ್ರಿಸಲು ಅಶ್ವಾರೋಹಿ ಪೆÇಲೀಸ್ ಸಿಬ್ಬಂದಿಗಳು ಹರ ಸಾಹಸ ಪಟ್ಟರು.
ಈ ವೇಳೆ ಒಬ್ಬ ಸಿಬ್ಬಂದಿ ಕುದುರೆಯಿಂದ ಕೆಳಗೆ ಬಿದ್ದರು.
ಆದರೆ ಅವರಿಗೆ ಯಾವುದೇ ತೊಂದರೆ ಆಗಿಲ್ಲ.

