ಮುಂದಿನ ವರ್ಷ ವಿಜೃಂಭಣೆ ದಸರಾ -ಸಿಎಂ ಬಿ.ಎಸ್.ವೈ.

ಮೈಸೂರು: ಕೊರೊನಾ ಸಂಕಷ್ಟ ಚಾಮುಂಡೇಶ್ವರಿ ದಯೆಯಿಂದ ಕಳೆದರೆ ಮುಂದಿನ ವರ್ಷ ವಿಜೃಂಭಣೆಯಿಂದ ದಸರಾ ಆಚರಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ದಸರಾ ಮಹೋತ್ಸವ ಜಂಬೂಸವಾರಿಗೆ ಚಾಲನೆ ನೀಡಲು ಮೈಸೂರಿಗೆ ಸೋಮವಾರ ಆಗಮಿಸಿದ ಸಿಎಂ ಬಿ.ಎಸ್.ವೈ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ತಾಯಿ ಚಾಮುಂಡೇಶ್ವರಿ ದಯೆಯಿಂದ ಕೊರೊನಾದಿಂದ ಬಿಡುಗಡೆಗೊಂಡ ಮೇಲೆ ಮುಂದಿನ ವರ್ಷ ವಿಜೃಂಭಣೆಯಿಂದ ನಾವು ಆಚರಿಸುವಂತಹ ಶಕ್ತಿ ಆ ತಾಯಿ ಚಾಮುಂಡೇಶ್ವರಿ ಕೊಡಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆಂದರು.
ಎಲ್ಲ ಸಂಕಷ್ಟದಿಂದ ಪಾರಾಗಿ ನೆಮ್ಮದಿಯಿಂದ ಬದುಕುವ ಕಾಲ ತಾಯಿ ಚಾಮುಂಡೇಶ್ವರಿ ನೀಡಲಿ ಎಂದವರು ತಿಳಿಸಿದರು.
ಈ ಬಾರಿ ಕೊರೊನಾ ಹಿನ್ನೆಲೆ ದಸರಾ ಜಂಬೂಸವಾರಿ ಸರಳವಾಗಿ ಮಾಡಲಾಗುತ್ತಿದೆ.
ಈ ಸಂದಭಧಲ್ಲಿ ನಾಡಿನ ಎಲ್ಲ ಜನರಿಗೆ ವಿಜಯದಶಮಿಯ ಶುಭಾಶಯ ಕೋರಿದರು.