ಸಿದ್ದರಾಮಯ್ಯರ ಧಮ್ ಏನು ಎಂದು ನೋಡಿದ್ದೇನೆ -ಸಚಿವ ಎಸ್.ಟಿ.ಎಸ್.

ಮೈಸೂರು: ಸಿದ್ದರಾಮಯ್ಯರ ಧಮ್ ಏನು ಎಂದು ನೋಡಿದ್ದೇನೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಹೇಳಿದರು.
ನಗರದಲ್ಲಿ ಮಂಗಳವಾರ ಸಚಿವ ಎಸ್. ಟಿ. ಸೋಮಶೇಖರ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಸಿದ್ದರಾಮಯ್ಯರ ಧಮ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಎಸ್.ಟಿ.ಎಸ್. ಸಿದ್ದರಾಮಯ್ಯ ಧಮ್ ಹಾಗೂ ಆಡಳಿತ ಎರಡನ್ನು ನೋಡಿದ್ದೇನೆ. ಇವರು ಸದನದ ಒಳಗೆ ಒಂದು ಮಾತನಾಡುತ್ತಾರೆ ಹೊರಗೆ ಒಂದು ಮಾತನಾಡುತ್ತಾರೆಂದು ಟೀಕಿಸಿದರು.
ನಾನು ಇವರ ಜೊತೆ 5 ವರ್ಷ ಕೆಲಸ ಮಾಡಿದ್ದಾನೆ. ಇವರು ಸದನದಲ್ಲಿ ಏನು ಮಾತನಾಡುತ್ತಾರೆ ಹಾಗೂ ಯಾವುದಕ್ಕೆ ಮಾತನಾಡಲು ಅವಕಾಶ ಇದೆ ಅನ್ನೋದು ಗೊತ್ತಿದೆ. ಸುಮ್ಮನೆ ನಮ್ ಧಮ್ ಯಾಕೇ ಟೆಸ್ಟ್ ಮಾಡ್ತೀರಾ ಎಂದು ಸಿದ್ದರಾಮಯ್ಯಗೆ ಸಚಿವ ಸೋಮಶೇಖರ್ ಟಾಂಗ್ ನೀಡಿದರು.
ಸದನ ಕರೆದರೆ ಇವರು ಬಾಯ್ ಕಾಟ್ ಮಾಡಿ ಹೊರಗೆ ಹೋಗ್ತಾರೆ. ಅದಕ್ಯಾಕೆ ಸದನ ಕರಿಬೇಕು ಎಂದು ಸೋಮಶೇಖರ್ ಪ್ರಶ್ನಿಸಿದರು.
ಸಿದ್ದರಾಮಯ್ಯ ಹೀರೋ, ವಿಲನ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಚಿವ ಎಸ್.ಟಿ ಸೋಮಶೇಖರ್ ಇವರ್ಯಾರು ಅಲ್ಲ ಯಡ್ಯೂರಪ್ಪರೇ ಹಿರೋ, ವಿಲನ್ ಎಲ್ಲರನ್ನು ಸಿಎಂ ನಿಭಾಯಿಸುತ್ತಾರೆಂದರು.
7 ತಿಂಗಳಿನಿಂದ ಯಡಿಯೂರಪ್ಪ ಕೆಲಸ ಮಾಡಿದ್ದಾರೆ. ಹಾಗಾಗಿ ಈ ಕೊರೊನಾ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಒಬ್ಬರೆ ಹೀರೋ ಅವರೇ ವಿಲನ್ ಎಂದು ನುಡಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಎಸ್.ಟಿಎಸ್. ಮುನಿರತ್ನ ನಾಲ್ಕು ವರ್ಷಗಳಿಂದ ಕೇಬಲ್ ಬಿಸಿನೆಸ್ ಮಾಡುತ್ತ್ತಿದ್ದಾರೆ. ಸೆಟ್ ಅಪ್ ಬಾಕ್ಸ್ ಕೊಡ್ತಿರೋದು ಇದೆ ಮೊದಲೇನಲ್ಲ ಎಂದು ಹೇಳಿದರು.