ಜಿ.ಆರ್.ಸತ್ಯಲಿಂಗರಾಜು
ಸೆಶಲ್ಸ್ ಎಂಬುದು ಮಾಹೆ ಸೇರಿದಂತೆ ಅನೇಕ ಪುಟ್ಟಪುಟ್ಟ ದ್ವೀಪಗಳಿರುವ ಸ್ವತಂತ್ರ ರಾಷ್ಟ್ರ.
ಬ್ರಿಟಿಷ್ ವಸಾಹತುನಿಂದ ಬಿಡಿಸಿಕೊಂಡು ಸ್ವತಂತ್ರ ರಾಷ್ಟ್ರವಾದುದು 1977ರಲ್ಲಿ.
ಪೂರ್ವ ಆಫ್ರಿಕಾದ ಈ ರಾಷ್ಟ್ರದ ಆಸುಪಾಸಿನಲ್ಲಿ ಅನೇಕ ಹೆಸರಾಂತ ದ್ವೀಪ ರಾಷ್ಟ್ರ ಗಳಿವೆ.
ಸೆಶಲ್ಸ್ ರಾಜಧಾನಿ ವಿಕ್ಟೋರಿಯಾ. ಬೀಚುಗಳು, ಅರಣ್ಯ, ವಿಶೇಷ ವನ್ಯಜೀವಿ ತಾಣವಾಗಿರುವ ಈ ರಾಷ್ಟ್ರಕ್ಕೆ ಪ್ರವಾಸೋದ್ಯಮವೇ ಆದಾಯದ ಮೂಲ.
2020ರ ಜನಗಣತಿ ರೀತ್ಯಾ ಈ ರಾಷ್ಟ್ರ ದ ಜನರಲ್ಲಿ ಶೇ. 56ರಷ್ಟು ಮಂದಿ ನಗರ ಪ್ರದೇಶದಲ್ಲಿದ್ದಾರೆ. ಭಾರತೀಯರೂ ಸೇರಿದಂತೆ ಅನ್ಯ ರಾಷ್ಟ್ರ, ಅನ್ಯ ಧರ್ಮೀಯರೂ ಇದ್ದಾರೆ.
ಎಲ್ಲರನ್ನ ಲೆಕ್ಕಕ್ಕೆ ತೆಗೆದುಕೊಂಡರೂ 98,546 ಜನಸಂಖ್ಯೆ ಇದೆ. ವಿಶ್ವ ಜನಸಂಖ್ಯೆಯಲ್ಲಿದು ಶೇ. 0. ಅತಿ ಕಡಿಮೆ ಜನಸಂಖ್ಯೆಯ ದೇಶಗಳಲ್ಲಿ ಇದು ಮುಖ್ಯವಾದುದು.
ಈ ಪುಟ್ಟ ಜನಸಂಖ್ಯೆ ದೇಶಕ್ಕೀಗ ಭಾರತ ಮೂಲದ ವಾವೆಲ್ ರಾಮ್ ಕಲಾವನ್ ಶೇ. 54ರಷ್ಟು ಮತ ಗಳಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಇವರ ತಾತ ಬಿಹಾರದ ಗೋಪಾಲಗಂಜ್‍ನವರು.
1977ರಿಂದ ಇದೇ ಮೊದಲ ಸಲ ವಿಪಕ್ಷದವರು ಆಯ್ಕೆಯಾಗಿರುವುದು.
ಪಾವಲ್ ಅಲ್ಲಿನ ಆಂಗ್ಲಿಕನ್ ಚರ್ಚಿನ ಮಾಜಿ ಧರ್ಮಗುರು.
ಅಂದಹಾಗೆ ಈ ದ್ವೀಪ ರಾಷ್ಟಕ್ಕೆ ಪ್ರಧಾನಿ ನರೇಂದ್ರ ಮೋದಿಯೂ ಭೇಟಿ ಕೊಟ್ಟಿದ್ದರು.

