ಬೆಂಗಳೂರು: ಮಾನವೀಯತೆಯ ದೃಷ್ಟಿಯಿಂದ ನಾನು ಮುನಿರತ್ನ ಅವರ ಪರ ಪ್ರಚಾರಕ್ಕೆ ತೆರಳುತ್ತೇದ್ದೇನೆ ಎಂದು ಖ್ಯಾತ ನಟ ದರ್ಶನ್ ಹೇಳಿದರು.
ಆರ್ ಆರ್ ನಗರ ಚುನಾವಣಾ ಪ್ರಚಾರಕ್ಕೆ ತೆರಳುವ ಮುನ್ನ ತಮ್ಮ ನಿವಾಸದ ಬಳಿ ದರ್ಶನ್ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಮುನಿರತ್ನ ಅವರು ಲಾಕ್ ಡೌನ್ ಸಮಯದಲ್ಲಿ ಕ್ಷೇತ್ರದ ಜನತೆಗೆ ದಿನಸಿ ವಿತರಿಸುವ ಮೂಲಕ ಸಹಾಯ ಮಾಡಿದ್ದಾರೆ. ಹಾಗಾಗಿ ಮಾನವೀಯತೆ ದೃಷ್ಟಿಯಿಂದ ನಾನು ಅವರ ಪರ ಪ್ರಚಾರಕ್ಕೆ ತೆರಳುತ್ತಿದ್ದೇನೆ ಎಂದರು.
ಮುನಿರತ್ನ ಬೆಂಬಲಿಸಲು ಅವರು ಮಾಡಿರುವ ಸಹಾಯವೇ ಸಾಕು. ಮಾನವೀಯತೆಯ ಆಧಾರದ ಮೇಲೆ ಅವರ ಪರ ಪ್ರಚಾರ ಮಾಡುತ್ತೇನೆ. ಮುನಿರತ್ನ ಕರೆದಲ್ಲಿಗೆ ಹೋಗಿ ಪ್ರಚಾರ ಮಾಡ್ತೀನಿ ಎಂದವರು ಹೇಳಿದರು.
ಮುನಿರತ್ನ ನನ್ನ ಆಪ್ತರು. ಸಂಕಷ್ಟಕ್ಕೆ ನಿಂತವರ ಪರ ಪ್ರಚಾರಕ್ಕೆ ತೆರಳುತ್ತಿರುವುದಾಗಿ ದರ್ಶನ್ ಅವರು ಹೇಳಿದರು.
ಪಕ್ಷ ಹಾಗೂ ನಿರ್ಮಾಪಕರು ಎಂದಲ್ಲ, ವ್ಯಕ್ತಿ ನೋಡಿ ನಾನು ಪ್ರಚಾರಕ್ಕೆ ಹೋಗುತ್ತಿದ್ದೇನೆ ಎಂದು ದರ್ಶನ್ ತಿಳಿಸಿದರು.
ಮಾನವೀಯತೆಯ ದೃಷ್ಟಿಯಿಂದ ಮುನಿರತ್ನ ಪರ ಪ್ರಚಾರಕ್ಕೆ ತೆರಳುತ್ತೇದ್ದೇನೆ -ದರ್ಶನ್

