ಬೆಂಗಳೂರು: ಕೊರೊನಾ ನಿಯಮ ಪಾಲಿಸದ ನಗರದ 7 ಖಾಸಗಿ ಆಸ್ಪತ್ರೆಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ.
24 ಗಂಟೆಯಲ್ಲಿ ನೋಟಿಸ್ ಗೆ ಉತ್ತರಿಸದಿದ್ದರೆ ಆಸ್ಪತ್ರೆಯ ಲೈಸೆನ್ಸ್ ನ್ನು ಏಕೆ ರದ್ದುಮಾಡಬಾರದು ಎಂದು ಬಿಬಿಎಂಪಿ ಕೇಳಿದೆ.
ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ನೋಟಿಸ್ ಜಾರಿ ಮಾಡಿದ್ದು, ಶೇ. 50ರಷ್ಟು ಕೋವಿಡ್ ಬೆಡ್ ನೀಡದ ಹಿನ್ನೆಲೆಯಲ್ಲಿ ವಿವರಣೆ ನೀಡುವಂತೆ 7 ಆಸ್ಪತ್ರೆಗಳಿಗೆ ತಿಳಿಸಿದ್ದಾರೆ.
ಕೊರೊನಾ ಸೋಂಕಿತರ ಚಿಕಿತ್ಸೆಗೆ ಆನ್‍ಲೈನ್ ಪೆÇೀರ್ಟ್‍ನಲ್ಲಿ ಹಾಸಿಗೆ ಬ್ಲಾಕ್ ಮಾಡಿದರೂ, ದಾಖಲಿಸುವ ವೇಳೆ ಆಸ್ಪತ್ರೆಯಲ್ಲಿ ಹಾಸಿಗೆಗಳು ಖಾಲಿ ಇಲ್ಲ ಎಂದು ಹೇಳಿ ಚಿಕಿತ್ಸೆಗೆ ನಿರಾಕರಿಸಲಾಗಿತ್ತು ಹಾಗಾಗಿ ನೋಟಿಸ್ ನೀಡಲಾಗಿದೆ.
ಕೊರೊನಾ ನಿಯಮ ಪಾಲಿಸದ 7 ಆಸ್ಪತ್ರೆಗಳಿಗೆ ನೋಟಿಸ್

