ಜೆಡಿಎಸ್, ಕಾಂಗ್ರೆಸ್ ವಿರುದ್ಧ ಚುನಾವಣಾ ಹೋರಾಟ -ಸಚಿವ ಸಿ.ಟಿ. ರವಿ

ಚಿಕ್ಕಮಗಳೂರು: ಜೆಡಿಎಸ್, ಕಾಂಗ್ರೆಸ್ ವಿರುದ್ಧ ಮಾತ್ರ ಚುನಾವಣಾ ಹೋರಾಟ ಎಂದು ಸಚಿವ ಸಿ.ಟಿ. ರವಿ ಹೇಳಿದರು.
ನಗರದಲ್ಲಿ ಮಂಗಳವಾರ ಸಚಿವ ಸಿ. ಟಿ. ರವಿ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಆರ್. ಆರ್. ನಗರ ಅಭ್ಯರ್ಥಿ ಕುಸುಮ ಅವರ ಬಗ್ಗೆ ಆಗಲಿ ಅವರ ಅತ್ತೆ ಅವರ ಬಗ್ಗೆ ಆಗಲಿ ಬಿಜೆಪಿ ಪಕ್ಷದ ಹೋರಾಟವಲ್ಲ ನಮ್ಮದು ಜೆಡಿಎಸ್, ಕಾಂಗ್ರೆಸ್ ವಿರುದ್ಧ ಚುನಾವಣಾ ಹೋರಾಟ ಎಂದು ಸಚಿವ ಸಿ.ಟಿ. ರವಿ ತಿಳಿಸಿದರು.
ಇವಿಎಂ ದೋಷ ಬಗ್ಗೆ ಕಾಂಗ್ರೆಸ್ ನವರು ದೂರುವುದರಲ್ಲಿ ಅನುಮಾನವಿಲ್ಲ ಎಂದ ಅವರು ಕಾಂಗ್ರೆಸ್ ಸೋಲು ಖಚಿತವಾಗುತ್ತಿದ್ದಂತೆ ಏನಾದರೂ ಒಂದು ಕಾರಣ ಹುಡುಕುತ್ತಾರೆ ಎಂದರು.
ಕಾಂಗ್ರೆಸ್ ಗೆದ್ದರೆ ಇವಿಎಮ್ ಯಂತ್ರ ದೋಷ ಅವರಿಗೆ ಕಂಡುಬರುವುದಿಲ್ಲ ಎಂದು ಟೀಕಿಸಿದ ಸಚಿವ ರವಿ ಅವರು ರಾಜಕೀಯ ಜೀವನದಲ್ಲಿ ಎಷ್ಟು ಚುನಾವಣೆಗಳನ್ನು ಎದುರಿಸಿರುವ ಜಯಚಂದ್ರ ಅಂಥವರೇ ಇವಿಎಂ ಯಂತ್ರಗಳ ಬಗ್ಗೆ ದೋಷಿಸುತ್ತಾರೆ ಎಂದರೆ ಏನು ಹೇಳಬೇಕು ತಿಳಿಯುತ್ತಿಲ್ಲ ಎಂದರು.