ಡ್ರಗ್ಸ್ ದಂಧೆ: ಮಾಜಿ ಸಚಿವರ ಪುತ್ರ ಸೇರಿ ಮೂವರ ಬಂಧನ

ಬೆಂಗಳೂರು: ಮಾಜಿ ಸಚಿವ ರುದ್ರಪ್ಪ ಲಮಾಣಿ ಅವರ ಪುತ್ರ ದರ್ಶನ್ ಲಮಾಣಿ ಸೇರಿದಂತೆ ಮೂರು ಮಂದಿ ಆರೋಪಿಗಳನ್ನು ಸಿಸಿಬಿ ಪೆÇಲೀಸರು ಡ್ರಗ್ಸ್ ದಂಧೆ ಪ್ರಕರಣದಲ್ಲಿ ಬಂಧಿಸಿದ್ದಾರೆ.
ಡಾರ್ಕ್‍ನೆಟ್ ಮೂಲಕ ಡ್ರಗ್ಸ್ ತರಿಸಿ ಮಾರಾಟ ಮಾಡುತ್ತಿದ್ದ ಪ್ರಕರಣದ ಆರೋಪಿಗಳಾದ ಹೇಮಂತ್ ಮತ್ತು ಸುನೀಶ್ ಪರಾರಿಯಾಗಿದ್ದರು.
ಆರೋಪಿಗಳು ಗೋವಾದಲ್ಲಿ ತಲೆ ಮರೆಸಿಕೊಂಡಿರುವ ಮಾಹಿತಿ ಆಧರಿಸಿ ಅಲ್ಲಿಗೆ ತೆರಳಿ ಪೆÇಲೀಸರು ಆರೋಪಿಗಳನ್ನು ಬಂಧಿಸುವಾಗ ಅವರೊಂದಿಗೆ ದರ್ಶನ್ ಲಮಾಣಿ ಇರುವುದು ಪತ್ತೆ ಆಗಿದೆ.
ಆರೋಪಿಗಳಿಗೆ ಆಶ್ರಯ ನೀಡಿ, ಅವರಿಗೆ ಸಹಾಯ ಮಾಡಿದ ಆರೋಪಕ್ಕಾಗಿ ದರ್ಶನ್ ಲಮಾಣಿ ಅವರನ್ನು ಬಂಧಿಸಲಾಗಿದೆ.