ನವದೆಹಲಿ: ದೆಹಲಿಯಲ್ಲಿ ದಾಳಿ ನಡೆಸಲು ಸಜ್ಜಾಗಿದ್ದ ಇಬ್ಬರು ಜೈಷ್-ಇ-ಮೊಹಮ್ಮದ್ ಉಗ್ರ ಸಂಟನೆಯ ಭಯೋತ್ಪಾದಕರನ್ನು ಪೆÇಲೀಸರು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ನಿವಾಸಿಗಳಾದ ಅಬ್ದುಲ್ ಲತೀಫ್ (22) ಹಾಗೂ ಮೊಹಮ್ಮದ್ ಅಶ್ರಫ್ ಖತಾನಾ (20) ಬಂಧಿತ ಉಗ್ರರು.
ದೆಹಲಿಯಲ್ಲಿ ದೊಡ್ಡ ಮಟ್ಟದಲ್ಲಿಯೇ ದಾಳಿ ನಡೆಸಲು ಸಜ್ಜಾಗಿದ್ದ ಈ ಇಬ್ಬರು ಉಗ್ರರನ್ನು ದೆಹಲಿಯ ಸರಾಯ್ ಕೇಲ್ ಖಾನ್ ಪ್ರದೇಶದಲ್ಲಿ ಮಂಗಳವಾರ ರಾತ್ರಿ ಬಂಧಿಸಲಾಗಿದೆ.
ಇವರು ಪಾಕಿಸ್ತಾದನ ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದವರಾಗಿದ್ದು, ಇವರ ಬಳಿ ಇದ್ದ ಅರೆ-ಸ್ವಯಂಚಾಲಿತ ಪಿಸ್ತೂಲುಗಳು ಮತ್ತು 10 ಜೀವಂತ ಗುಂಡುಗಳನ್ನು ಪೆÇಲೀಸರು ವಶಕ್ಕೆ ಪಡೆದಿದ್ದಾರೆ.
ತಪ್ಪಿದ ಭಯೋತ್ಪಾದಕ ದಾಳಿ: ದೆಹಲಿಯಲ್ಲಿ ಇಬ್ಬರು ಉಗ್ರರ ಬಂಧನ

