ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೆ ಸಿಬಿಐ ಮತ್ತೊಮ್ಮೆ ಸಮನ್ಸ್ ಜಾರಿಗೊಳಿಸಿದೆ.
ನ. 23ರಂದು ಹಾಗರಾಗಲು ಸಿಬಿಐ ಡಿಕೆಶಿಗೆ ಸೂಚಿಸಿದೆ.
ಈ ಕುರಿತು ಕೆಪಿಸಿಸಿ ಅಧ್ಯಕ್ ಡಿ. ಕೆ. ಶಿವಕುಮಾರ್ ಪ್ರತಿಕ್ರಿಯಿಸಿ, ಬೆಂಗಳೂರು ಸಿಬಿಐ ಕಚೇರಿಯಿಂದ ಅ. 5ರಂದು ತಮ್ಮ ನಿವಾಸದ ಮೇಲೆ ನಡೆದಿದ್ದ ದಾಳಿ ಸಂಬಂಧ ತಮಗೆ ನ. 19ರಂದು ಸಮನ್ಸ್ ಜಾರಿಯಾಗಿದೆ. ನ. 23ರಂದು ಹಾಜರಾಗಲು ಸೂಚಿಸಿದ್ದಾರೆ ಎಂದು ಹೇಳಿದರು.
ನ. 19ರಂದು ಮಗಳ ನಿಶ್ಚಿತಾರ್ಥದಲ್ಲಿ ಭಾಗಿಯಾಗಿದ್ದರಿಂದ ಸಿಬಿಐ ಕಚೇರಿಗೆ ಹಾಜರಾಗಲಾಗಲಿಲ್ಲ ಹಾಗೂ ನ. 22ರಿಂದ ತಾವು ಉತ್ತರ ಕರ್ನಾಟಕ ಪ್ರವಾಸದಲ್ಲಿರುವುದರಿಂದ ಹಾಜರಾಗಲು ಆಗುವುದಿಲ್ಲ. ಅದರ ಬದಲಾಗಿ ನ. 25ರಂದು ಸಂಜೆ 4 ಗಂಟೆಗೆ ಸಿಬಿಐ ಕಚೇರಿ ವಿಚಾರಣೆಗೆ ಹಾಜರಾಗುವುದಾಗಿ ಮನವಿ ಮಾಡಿದ್ದು ಇದಕ್ಕೆ ಸಿಬಿಐ ಒಪ್ಪಿಗೆ ಸೂಚಿಸಿದೆ ಎಂದು ಡಿಕೆಶಿ ತಿಳಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿ.ಗೆ ಸಿಬಿಐ ಸಮನ್ಸ್

