ಮಂಗಳೂರಲ್ಲಿ ಗೋಡೆ ಮೇಲೆ ವಿವಾದಾತ್ಮಕ ಬರಹ

ಮಂಗಳೂರು: ಮಂಗಳೂರಲ್ಲಿ ಭಾನುವಾರ ಗೋಡೆ ಮೇಲೆ ಮತ್ತೊಂದು ವಿವಾದಾತ್ಮಕ ಬರಹ ಕಂಡು ಬಂದಿದೆ.
ನಗರದ ನ್ಯಾಯಾಲಯದ ಆವರಣದಲ್ಲಿರುವ ಹಳೆಯ ಪೆÇಲೀಸ್ ಔಟ್ ಪೆÇೀಸ್ಟ್ ಗೋಡೆ ಮೇಲೆ ಉರ್ದು ಭಾಷೆಯ ಸಾಲು ಬರೆಯಲಾಗಿದೆ.
ಉರ್ದು ಭಾಷೆಯ ಈ ಸಾಲುಗಳನ್ನು ಇಂಗ್ಲಿಷ್ ನಲ್ಲಿ ಬರೆದಿದೆ.
ಪ್ರವಾದಿಗೆ ಕೋಪ ಬಂದರೆ ದೇಹದಿಂದ ತಲೆ ಬೇರ್ಪಡುವುದೊಂದೇ ಶಿಕ್ಷೆ ಎಂದು ಬರೆದಿರುವುದು ಕಂಡು ಬಂದಿದೆ.
ಈ ಬಗ್ಗೆ ಮಾಹಿತಿ ತಿಳಿದ ಪೆÇೀಲಿಸರು ಸ್ಥಳಕ್ಕೆ ಆಗಮಿಸಿ ವಿವಾದಾತ್ಮಕ ಬರಹವನ್ನು ಅಳಿಸಿ ಹಾಕಿದ್ದಾರೆ.
ಈ ಹಿಂದೆ ನ. 27ರಂದು ಬಿಜೈನ ಅಪಾರ್ಟ್ ಮೆಂಟ್ ನ ಗೋಡೆ ಮೇಲೆ ಉಗ್ರ ಸಂಘಟನೆಗಳನ್ನು ಬೆಂಬಲಿಸುವ ಬರಹ ಕಂಡುಬಂದಿತ್ತು.