ಮೈಸೂರು: ಎಲ್ಲದರಲ್ಲೂ ರಾಜಕಾರಣ ಮಾಡೋದೆ ಕಾಂಗ್ರೆಸ್ ಕೆಲಸ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಹೇಳಿದರು.
ಸಚಿವ ಸೋಮಶೇಖರ್ ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಎಲ್ಲದರಲ್ಲೂ ರಾಜಕಾರಣ ಮಾಡೋದೆ ಕಾಂಗ್ರೆಸ್ ಕೆಲಸ. ನಮ್ಮದು ಅಭಿವೃದ್ದಿ ಕೆಲಸ ಎಂದರು.
ಸಂತೋಷ್ ಆತ್ಮಹತ್ಯೆ ಯತ್ನ ಕೇಸ್ ವಿಚಾರಕ್ಕೆ ಎಸ್ ಟಿಎಸ್ ಪ್ರತಿಕ್ರಿಯಿಸಿ, ಯಾವ ಸಿಡಿನೂ ಇಲ್ಲ ಅದೊಂದು ಕೆಟ್ಟ ಘಳಿಗೆ ಅದು ಮುಗಿದ ಅಧ್ಯಾಯ. ಸಂತೋಷ್ ಒಬ್ಬ ಜಂಟಲ್‍ಮೆನ್ ರಾಜಕೀಯದಲ್ಲಿ ಬೆಳೆಯುತ್ತಿದ್ದಾನೆ. ಹುಷಾರಾಗಿ ಮನೆಗೆ ಬಂದಿದ್ದಾನೆ. ಎಲ್ಲಾ ವಿಚಾರ ಮುಗಿದಿದೆ ಎಂದರು.
ಅದು ಯಾವುದೋ ಸಿಡಿ ಪಾಡಿ ವಿಷಯ ಹಿಡಿದುಕೊಂಡು ಕಾಂಗ್ರೆಸ್‍ನವರು ಓಡಾಡುತ್ತಿದ್ದಾರೆ. ಬೇರೆ ಏನು ಕೆಲಸ ಇಲ್ಲ ಅವರಿಗೆ ಮಾಡುವುದಕ್ಕೆ ಎಂದು ಸಚಿವ ಸೋಮಶೇಖರ್ ವ್ಯಂಗ್ಯವಾಡಿದರು.
ಮತ್ತೊಂದು ಪ್ರಶ್ನೆಗೆ ಸೋಮಶೇಖರ್ ಉತ್ತರಿಸಿ, ಯಾವ ಬಾಂಬೆನೂ ಇಲ್ಲ ಡೆಲ್ಲಿನೂ ಇಲ್ಲ ಬೆಂಗಳೂರು ಇಲ್ಲ ನಮ್ಮದು ಬಿಜೆಪಿ ಟೀಂ. ಎಲ್ಲಾ ಒಂದೇ ಎಂದು ಹೇಳಿದರು.

