ಬೆಂಗಳೂರು: ನಾನು ರೋಗಿ ವಿರುದ್ಧ ಹೋರಾಡುವುದಿಲ್ಲ. ರೋಗದ ವಿರುದ್ಧ ಹೋರಾಡುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಎನ್. ಆರ್. ಸಂತೋಷ್ ಹೇಳಿದರು.
ಸಂತೋಷ್ ಸೋಮವಾರ ನಗರದ ಎಂ.ಎಸ್ ರಾಮಯ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ನನಗೆ ಯಾವುದೇ ರಾಜಕೀಯ ಒತ್ತಡ ಇಲ್ಲ. ಇದೊಂದು ಆಕಸ್ಮಿಕ ಅಚಾತುರ್ಯದ ಘಟನೆ. ನಾನು ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಯಲ್ಲ ಎಂದು ಸಂತೋಷ್ ಹೇಳಿದರು.
ಕಳೆದ ಮೂರು ದಿನದ ಹಿಂದೆ ಮದುವೆ ಇತ್ತು. ಅಲ್ಲಿ ಊಟ ಮಾಡಿದ ಪರಿಣಾಮ ಅಜೀರ್ಣವಾಗಿತ್ತು. ಬೇರೆ ಮಾತ್ರೆ ತಗೊಂಡ ಹಿನ್ನೆಲೆಯಲ್ಲಿ ಡೋಸ್ ಹೆಚ್ಚಾಗಿತ್ತು. ರಾಜಕೀಯ ಒತ್ತಡದಿಂದ ನಿದ್ದೆ ಮಾತ್ರೆ ತೆಗೆದುಕೊಂಡಿರಲಿಲ್ಲ ಎಂದು ಅವರು ತಿಳಿಸಿದರು.
ರಾಜಕೀಯ ಒತ್ತಡ ಯಾವ ಕಾಲಕ್ಕೂ ಇರುತ್ತೆ, ಆದರೆ ಮಾತ್ರೆ ತಗೋಳ್ಳೋ ಸ್ವಭಾವ ಇಲ್ಲ. ನಿದ್ರೆ ಬರದೆ ಇದ್ದಾಗ ಮಾತ್ರೆ ತಗೊಳ್ಳುತ್ತಿದೆ ಎಂದು ಅವರು ಹೇಳಿದರು.
ದಿಕೆಶಿ ಹೇಳಿಕೆಗೆ ಸಂತೋಷ್ ಪ್ರತಿಕ್ರಿಯಿಸಿ, ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿದೆ ಅವರಿಗೆ ಮತಿಗೆಟ್ಟಿದೆ ಎಂದರು.
ಬಾಯಿಗೆ ಬಂದಂತೆ ಮಾತನಾಡಬೇಡಿ ಸಿದ್ದರಾಮಯ್ಯನವರನ್ನು ನೋಡಿ ಕಲಿಯಿರಿ ಎಂದು ಸಂತೋಷ್ ಡಿಕೆಶಿಗೆ ಹೇಳಿದರು.
ಸಿಎಂ ಯಡಿಯೂರಪ್ಪನವರ ವಿರುದ್ಧ ಹೇಳಿಕೆ ನೀಡುವ ಮುನ್ನ ಯೋಚಿಸಿ ಹೇಳಿಕೆ ನೀಡಿ ಎಂದರು.

