ಮಂಗಳೂರು: ನಗರದಲ್ಲಿ ಉಗ್ರರ ಪರ ಗೋಡೆಯಲ್ಲಿ ಬರೆದ ಪ್ರಕರಣ ಸಂಬಂಧ ಪೊಲೀಸರು ಒಬ್ಬನನ್ನು ಬಂಧಿಸಿದ್ದಾರೆ.
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ವಾಸಿ ಮಹಮ್ಮದ್ ನಝೀರ್ ಬಂಧಿತ ಆರೋಪಿ.
ಮಹಮ್ಮದ್ ನಝೀರ್ ನನ್ನು ಮಂಗಳೂರು ಕದ್ರಿ ಠಾಣಾ ಪೆÇಲೀಸರು ಬಂಧಿಸಿ, ಶಂಕಿತನ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಮಂಗಳೂರಿನಲ್ಲಿ ಎರಡು ಸ್ಥಳಗಳಲ್ಲಿ ಗೋಡೆ ಮೇಲೆ ಉಗ್ರರ ಪರ ಬರೆಯಲಾಗಿತ್ತು.
ಈ ಪ್ರಕರಣ ಸಂಬಂಧ ಪೆÇಲೀಸರು ಇದೀಗ ಒಬ್ಬನನ್ನು ಬಂಧಿಸಿದ್ದು, ಉಳಿದವರ ಬಂಧನಕ್ಕೆ ಬಲೆ ಬೀಸಿದ್ದಾರೆ.

