ಜನವರಿಯಲ್ಲಿ ರಜನಿಕಾಂತ್ ಪಕ್ಷ ಲಾಂಚ್

ಚೆನ್ನೈ: ಸೂಪರ್ ಸ್ಟಾರ್ ಖ್ಯಾತ ನಟ ರಜನಿಕಾಂತ್ ತಮ್ಮ ರಾಜಕೀಯ ಪಕ್ಷವನ್ನು ಜನವರಿಯಲ್ಲಿ ಲಾಂಚ್ ಮಾಡಲಿದ್ದಾರೆ.
ತಮ್ಮ ರಾಜಕೀಯ ಪಕ್ಷವನ್ನು ಜನವರಿಯಲ್ಲಿ ಲಾಂಚ್ ಮಾಡಲಿದ್ದೇನೆ. ಈ ಕುರಿತು ಡಿಸೆಂಬರ್ 31ರಂದು ಘೋಷಣೆ ಮಾಡಲಿದ್ದೇನೆ ಎಂದು ನಟ ರಜನಿಕಾಂತ್ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಜನವರಿಯಲ್ಲಿ ರಾಜಕೀಯ ಪಕ್ಷವನ್ನು ಲಾಂಚ್ ಮಾಡಲಿದ್ದೇನೆ. ಈ ಕುರಿತು ಡಿಸೆಂಬರ್ 31ರಂದು ಘೋಷಣೆ ಮಾಡಲಿದ್ದೇನೆ ಎಂದು ಟ್ವೀಟ್‍ನಲ್ಲಿ ಅವರು ತಿಳಿಸಿದ್ದಾರೆ.
ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಜನಿಕಾಂತ್ ಅವರ ರಾಜಕೀಯ ಪಕ್ಷದ ಘೋಷಣೆ ಕುತೂಹಲ ಮೂಡಿಸಿದೆ.
ಮಕ್ಕಳ್ ಮಂಡ್ರಂ ಹಿರಿಯ ಪದಾಧಿಕಾರಿಗಳ ಜೊತೆ ರಜನಿಕಾಂತ್ ಸಭೆ ನಡೆಸಿ ಹೊಸ ಪಕ್ಷದ ಘೋಷಣೆ ಬಗ್ಗೆ ಟ್ವೀಟ್ ಮಾಡಿದ್ದಾರೆ.