ಸುಳ್ಳು ಹೇಳುವುದರಲ್ಲಿ ಹೆಚ್.ಡಿ ಕುಮಾರಸ್ವಾಮಿ ನಿಸ್ಸಿಮ -ಸಿದ್ದರಾಮಯ್ಯ

ಬೆಳಗಾವಿ: ಸುಳ್ಳು ಹೇಳುವುದರಲ್ಲಿ ಹೆಚ್.ಡಿ ಕುಮಾರಸ್ವಾಮಿ ನಿಸ್ಸಿಮ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಶನಿವಾರ ಸಿದ್ದರಾಮಯ್ಯ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಸುಳ್ಳು ಹೇಳುವುದರಲ್ಲಿ ಹೆಚ್.ಡಿ ಕುಮಾರಸ್ವಾಮಿ ನಿಸ್ಸಿಮ. ಸಮಯಕ್ಕೆ ತಕ್ಕಂತೆ ಸುಳ್ಳು ಹೇಳುತ್ತಾರೆಂದರು.
ಹೆಚ್.ಡಿ.ಕುಮಾರಸ್ವಾಮಿಗೆ ಗುಡ್‍ವಿಲ್ ಇದ್ದರೆ ತಾನೇ ಹಾಳಾಗೋದು ಎಂದರು.
37 ಸೀಟ್ ಗೆದ್ದವರನ್ನು ಸಿಎಂ ಮಾಡಿದ್ದು ಯಾರಿಗೆ ಲಾಭವಾಯಿತು? 80 ಕ್ಷೇತ್ರಗಳಲ್ಲಿ ಗೆದ್ದಿದ್ದರೂ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದು ಕಾಂಗ್ರೆಸ್. ಪದೇ ಪದೇ ಕಣ್ಣೀರು ಹಾಕೋದು ದೇವೇಗೌಡರ ಕುಟುಂಬ ಸಂಸ್ಕೃತಿ. ಹಾಗಾಗಿ ಸಿಎಂ ಆದ ಒಂದೇ ತಿಂಗಳಿಗೆ ಕಣ್ಣೀರು ಹಾಕಿರಬಹುದು ಎಂದರು.
ಒಲೈಕೆಗೂ ಮತ್ತು ಇನ್ಯಾರನ್ನೋ ನಂಬಿಸಲು ಕಣ್ಣೀರು ಹಾಕುತ್ತಾರೆ ಎಂದು ಸಿದ್ದು ವ್ಯಂಗ್ಯವಾಡಿದರು.
ಹೆಚ್.ಡಿ ಕುಮಾರಸ್ವಾಮಿ ವೆಸ್ಟರ್ನ್ ಹೋಟೆಲ್ ತಾಜ್ ನಲ್ಲಿ ಕುಳಿತು ಅಧಿಕಾರ ನಡೆಸುತ್ತಿದ್ದರು. ಇವರ ಕೇಂದ್ರ ಸ್ಥಾನ ತಾಜ್ ವೆಸ್ಟಂಡ್ ಹೊಟೇಲ್ ಆಗಿತ್ತು. ಶಾಸಕರ ಕಷ್ಟ ಸುಖ ಕೇಳಲಿಲ್ಲ. ಶಾಸಕರಿಗೆ ಹೆಚ್.ಡಿ ಕುಮಾರಸ್ವಾಮಿ ಸಹಕಾರ ನೀಡದೇ ಇದ್ದುದ್ದರಿಂದ ಸಮ್ಮಿಶ್ರ ಸರ್ಕಾರ ಬಿತ್ತು. ನಮ್ಮ ಶಾಸಕರಿಂದಲೇ ಅವರು ಸಿಎಂ ಆಗಿದ್ದು ಎಂದರು.
ಹೆಚ್.ಡಿ ದೇವೇಗೌಡರು ಯಾರನ್ನೂ ಬೆಳೆಸಲ್ಲ. ತಮ್ಮ ಕುಟುಂಬದವರನ್ನು ಮಾತ್ರ ಬೆಳೆಸುತ್ತಾರೆ ಎಂದು ಸಿದ್ಧರಾಮಯ್ಯ ದೂರಿದರು.