ಬೆಳಗಾವಿ: ಸಾರಿಗೆ ನೌಕರರನ್ನು ಸರಕಾರಿ ನೌಕರರೆಂದು ಪರಿಗಣಿಸುವಂತೆ ಆಗ್ರಹಿಸಿ ಪರಿಶಿಷ್ಟ ವರ್ಗಗಳ ವಾಲ್ಮಿಕಿ ನೌಕರರ ಸಂಘದ ರಾಜ್ಯ ಯುವ ಘಟಕ ಹಾಗೂ ಚಾಲಕ-ನಿರ್ವಾಹಕರು ಸರಕಾರವನ್ನು ಒತ್ತಾಯಿಸಿ ಶುಕ್ರವಾರ ಬಸ್ ಸೇವೆ ಸ್ಥಗಿತಗೊಳಿಸಿ ಪ್ರತಿಭಟಿಸಿದರು.
ಸಾರಿಗೆ ಕಾಪೆರ್Çೀರೇಷನ್ ನ ರಾಜ್ಯದ ನಾಲ್ಕು ನಿಗಮಗಳಲ್ಲಿ ಸದ್ಯ 1.30 ಲಕ್ಷ ನೌಕರರು ಕಾರ್ಯ ನಿರ್ವಹಿಸುತ್ತಿದ್ದು, ಇವರನ್ನು ಸರಕಾರಿ ನೌಕರರನ್ನಾಗಿ ಘೋಷಿಸಬೇಕು. ಹೆಚ್ಚಿನ ದುಡಿತ, ಕಡಿಮೆ ಸಂಬಳ ನೀಡಲಾಗುತ್ತಿದೆ. ಕಿರುಕುಳಕ್ಕೆ ನೌಕರರು ಬೇಸತ್ತಿದ್ದಾರೆ. ಸರಕಾರಿ ನೌಕರರಿಗಿಂತ ಶೇ. 4ರಷ್ಟು ಕಡಿಮೆ ಸಂಬಳ ನೀಡಲಾಗುತ್ತಿದೆ ಎಂದು ಪ್ರತಿಭಟನಾನಿರತರರು ತಿಳಿಸಿದ್ದಾರೆ.
ಬಸ್ ಸಂಚಾರ ಸ್ಥಗಿತದಿಂದ ವಿದ್ಯಾರ್ಥಿಗಳಿಗೆ ಅನಾನುಕೂಲವಾಗಿದೆ.
ಹುಬ್ಬಳ್ಳಿ ವರದಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಿಬ್ಬಂದಿಯನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಲು ಒತ್ತಾಯಿಸಿ ಹುಬ್ಬಳ್ಳಿಯಲ್ಲಿ ಸಾರಿಗೆ ಸಿಬ್ಬಂದಿ ಬಸ್ ತಡೆದು ಪ್ರತಿಭಟನೆ ನಡೆಸಿದ್ದಾರೆ.
ರಸ್ತೆಗೆ ಬಸ್ ಇಳಿಸದಂತೆ ತಮ್ಮ ಸಿಬ್ಬಂದಿಗೆ ಬಸ್ ಸಂಚಾರ ಮಾಡದಂತೆ ಮನವಿ ಮಾಡಿಕೊಳ್ಳುತಿದ್ದರು.

