ಬೆಂಗಳೂರು: ರಾಜ್ಯದಲ್ಲಿ ಉಂಟಾಗಿದ್ದ ಅತಿವೃಷ್ಟಿ ಮತ್ತು ಅನಾವೃಷ್ಟಿ ಕುರಿತಂತೆ ಅಧ್ಯಯನ ನಡೆಸಲು ರಾಜ್ಯಕ್ಕೆ ಭಾನುವಾರ ಕೇಂದ್ರ ತಂಡ ಆಗಮಿಸಲಿದೆ.
ರಮೇಶ್ ಕುಮಾರ್ ಗಂಠಿ ನೇತೃತ್ವದ 8 ಜನರ ತಂಡ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಲಿದೆ.
ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆಯಲಿದೆ.
ಎಷ್ಟು ಎಕರೆ ಪ್ರದೇಶದಲ್ಲಿ ಬೆಳೆ ಹಾನಿ ಹಾಗು ಎಲ್ಲೆಲ್ಲಿ ಮನೆ ಹಾಳಾಗಿದೆ ಎಂಬ ಸಂಪೂರ್ಣ ಮಾಹಿತಿ ಕಲೆ ಹಾಕಲಿದೆ.
ಬೆಳೆಹಾನಿ, ಮನೆ ಕಳೆದು ಕೊಂಡವರಿಗೆ ಸೂಕ್ತ ಪರಿಹಾರ ನೀಡುವ ಸಂಬಂಧ ರಾಜ್ಯ ಸರ್ಕಾರ ಕೇಂದ್ರಕ್ಕೆ ಹೆಚ್ಚಿನ ಅನುದಾನಕ್ಕೂ ಮನವಿ ಮಾಡಿತ್ತು.
ಕರೊನಾ ಹಿನ್ನಲೆಯಲ್ಲಿ ಸಂಕಷ್ಟದಲ್ಲಿದ್ದ ಜನ ಮಳೆ ಅಬ್ಬರ ಮತ್ತು ನೆರೆಯಂತಹ ಪ್ರಕೃತಿ ವಿಕೋಪದಿಂದ ಬೇಸತ್ತಿದ್ದಾರೆ. ಇದೀಗ ಕೇಂದ್ರ ತಂಡ ಬೇಟಿ ನೀಡಲಿದ್ದು, ಕೇಂದ್ರದಿಂದ ಯಾವ ರೀತಿಯ ಪರಿಹಾರ ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
ರಾಜ್ಯ ನೆರೆ ಹಾನಿ ಕುರಿತ ಮಾಹಿತಿಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭಾನುವಾರ ಸಂಜೆ ಗೃಹ ಕಛೇರಿ ಕೃಷ್ಣದಲ್ಲಿ ಮಾಹಿತಿ ನೀಡಲಿದ್ದಾರೆ.
ಸೆಪ್ಟೆಂಬರ್ ಮತ್ತು ಅಕ್ಟೋಬರ್‍ನಲ್ಲಿ ಉಂಟಾದ ನೆರೆ, ಮಳೆ ಕುರಿತ ಅಂಕಿ ಅಂಶ ಸಮೇತ ಮಾಹಿತಿಯೊಂದಿಗೆ ಆಗಿರುವ ನಷ್ಟದ ಅಂದಾಜು ನೀಡಲಿದ್ದಾರೆ.

