ವಿಸ್ಟ್ರಾನ್ ಆಪಲ್ ಐಫೆÇೀನ್ ಕಂಪನಿಯಲ್ಲಿ ಕಾರ್ಮಿಕರ ದಂಗೆ; ಕಾರ್ಖಾನೆ ಧ್ವಂಸ

ಕೋಲಾರ: ವಿಸ್ಟ್ರಾನ್ ಆಪಲ್ ಐಫೆÇೀನ್ ಕಂಪನಿಯಲ್ಲಿ ಕಾರ್ಮಿಕರ ದಂಗೆಯಿಂದ ಶನಿವಾರ ಕಾರ್ಖಾನೆ ಧ್ವಂಸವಾಗಿದೆ.
ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಹೊಸ ಐಫೆÇೀನ್ ತಯಾರಿಕೆ ಮಾಡುತ್ತಿದ್ದ ತೈವಾನ್ ಮೂಲದ ವಿಸ್ಟ್ರಾನ್ ಕಂಪನಿಯಲ್ಲಿ ದಂಗೆ ಎದ್ದಿರುವ 8 ಸಾವಿರ ಕಾರ್ಮಿಕರು, ಶನಿವಾರ ಬೆಳಗ್ಗೆ ಉಗ್ರ ಪ್ರತಿಭಟನೆ ನಡೆಸಿ, ಕಟ್ಟಡ ಮತ್ತು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ.
ತಮಗೆ ಆಗುತ್ತಿದ್ದ ಅನ್ಯಾಯವನ್ನು ಸಹಿಸಿಕೊಂಡು ಕಳೆದ ನಾಲ್ಕು ತಿಂಗಳಿಂದ ಸುಮ್ಮನಿದ್ದ ಕಾರ್ಮಿಕರು ಶನಿವಾರ ಬೆಳಗ್ಗೆ ಎರಡು ಪಾಳಿಯ ಕಾರ್ಮಿಕರು ಒಟ್ಟಿಗೆ ಸೇರಿ ಕೈಗೆ ಸಿಕ್ಕ ವಸ್ತುಗಳನ್ನು, ಯಂತ್ರೋಪಕರಣಗಳನ್ನು ಹಾಗೂ ಕಟ್ಟಡದ U್ಲಜುಗಳನ್ನು ಹೊಡೆದು ಹಾಕಿದ್ದಾರೆ.
ಕಂಪನಿಯ ಆವರಣದಲ್ಲಿ ನಿಂತಿದ್ದ ಮೂರರಿಂದ ನಾಲ್ಕು ಕಾರುಗಳು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿವೆ.
ಕಾರ್ಖಾನೆಯ ಹೊರಗೆ ಹಾನಿಯಾಗಿರುವುದರ ಜತೆಗೆ ಒಳಗಿದ್ದ ಬೆಲೆ ಬಾಳುವ ಬಾಳುವ ತಂತ್ರಗಳೂ ಕಾರ್ಮಿಕರ ಆಕ್ರೋಶಕ್ಕೆ ತುತ್ತಾಗಿವೆ. ಕೆಲ ದಿನಗಳ ಹಿಂದೆ ಅಳವಡಿಸÀಲಾಗಿದ್ದ ಸುಮಾರು ಎರಡರಿಂದ ಮೂರು ಕೋಟಿ ರೂ. ಬೆಲೆ ಬಾಳುವ ಹಲವು ಯಂತ್ರಗಳು ಧ್ವಂಸವಾಗಿವೆ ಎನ್ನಲಾಗಿದೆ.
ಈ ವಿಷಯ ತಿಳಿದು ಸ್ಥಳಕ್ಕೆ ಪೆÇಲೀಸರು ಬರುವ ವೇಳೆಗೆ ಇಡೀ ಕಾರ್ಖಾನೆ ಕಾರ್ಮಿಕರ ಆಕ್ರೋಶಕ್ಕೆ ಧ್ವಂಸವಾಗಿತ್ತು.
ಕಳೆದ ಹಲವು ತಿಂಗಳಿನಿಂದ ನರಸಾಪುರ ಕೈಗಾರಿಕೆ ಪ್ರದೇಶದಲ್ಲಿ ಪ್ರತಿಷ್ಠಿತ ಆಪಲ್ ಕಂಪನಿಯ ನೂತನ ಸರಣಿಯ ಐಫೆÇೀನ್‍ಗಳನ್ನು ತೈವಾನ್ ಮೂಲದ ಈ ಕಂಪನಿಯಲ್ಲಿ ತಯಾರಿಕೆ ಮಾಡಲಾಗುತ್ತಿತ್ತು.
ಅದಕ್ಕಾಗಿಯೇ ಸ್ಥಳೀಯರೂ ಸೇರಿದಂತೆ ತೈವಾನ್ ಮೂಲದ ಉದ್ಯೋಗಿಗಳು ಸೇರಿ 8ರಿಂದ 10 ಸಾವಿರ ಮಂದಿ ಕೆಲಸ ಮಾಡುತ್ತಿದ್ದರು.
ಈ ಪೈಕಿ ಸ್ಥಳೀಯರೇ ಎಂಟು ಸಾವಿರ ಮಂದಿ ಇದ್ದರೆನ್ನಲಾಗಿದ್ದು, ಕಳೆದ ನಾಲ್ಕು ತಿಂಗಳಿಂದ ಇವರ ಶೋಷಣೆ ನಡೆಯುತ್ತಿತ್ತು ಎನ್ನಲಾಗಿದೆ.
ಕಾರ್ಮಿಕ ಕಾಯ್ದೆ ಗಾಳಿಗೆ ತೂರಿ ಗುತ್ತಿಗೆ, ದಿನಗೂಲಿ ನೌಕರರನ್ನು ಸೇರಿಸಿಕೊಂಡು ಕಾರ್ಮಿಕರನ್ನು ಅಮಾನುಷವಾಗಿ ನಡೆಸಿಕೊಳ್ಳಲಾಗುತ್ತಿತ್ತು ಎಂದು ತಿಳಿದು ಬಂದಿದೆ.
ವಿಸ್ಟ್ರಾನ್ ಕಂಪನಿ ಬಳಿ ಬಿಗಿ ಪೆÇಲೀಸ್ ಬಂದೋಬಸ್ತ್ ಮಾಡಲಾಗಿದೆ.