ಬೆಳಗಾವಿ: ಗ್ರಾಮ ಪಂಚಾಯಿತಿ ಚುನಾವಣೆಯ ಕರ್ತವ್ಯಕ್ಕೆ ನಿಯೋಜನೆಗೊಂಡ ಅಧಿಕಾರಿ ಬಳಿ ಪಿಸ್ತೂಲ್ ಪತ್ತೆಯಾಗಿದೆ.
ಬೆಳಗಾವಿ ತಾಲೂಕಿನ ದೇಸೂರ ಗ್ರಾಮದಲ್ಲಿನ ಮತಗಟ್ಟೆಗೆ ನಿಯೋಜನೆಯಾಗಿದ್ದ ಅಧಿಕಾರಿ ಬಳಿ ಲೋಡೆಡ್ ಆಗಿರುವ ಪಿಸ್ತೂಲ್ ಇರುವುದನ್ನು ಗಮನಿಸಿದ ಸಿಬ್ಬಂದಿ ಪೆÇಲೀಸರಿಗೆ ಮಾಹಿತಿ ನೀಡಿದರು.
ಮತಗಟ್ಟೆ ಕೇಂದ್ರಕ್ಕೆ ಹಿರಿಯ ಪೆÇೀಲಿಸ್ ಅಧಿಕಾರಿಗಳು ಆಗಮಿಸಿ ಪಿಸ್ತೂಲ್ ನಲ್ಲಿ ತುಂಬಲಾಗಿದ್ದ ಗುಂಡುಗಳನ್ನು ಹೊರಗೆ ತೆಗೆಯುವಂತೆ ಸೂಚಿಸಿದ್ದಾರೆ.
ಚುನಾವಣೆ ಸಮಯದಲ್ಲಿ ಪೆÇಲೀಸ್ ಠಾಣೆಗೆ ಜಮಾ ಮಾಡಬೇಕಿದ್ದ ಪಿಸ್ತೂಲ್ ನ್ನು ಕರ್ತವ್ಯದ ಸಮಯದಲ್ಲಿ ತನ್ನೊಂದಿಗೆ ತರಲು ಕಾರಣವೇನು ಎಂಬುದನ್ನು ಕುರಿತು ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

