ಭಾರತದಲ್ಲಿ ರೂಪಾಂತರಿತ ಕೊರೊನಾ ವೈರಸ್ ಪತ್ತೆಯಾಗಿಲ್ಲ -ಡಾ. ಪಾಲ್

ನವದೆಹಲಿ: ಭಾರತದಲ್ಲಿ ರೂಪಾಂತರಿತ ಕೊರೊನಾ ವೈರಸ್ ಪತ್ತೆಯಾಗಿಲ್ಲ ಎಂದು ಎನ್‍ಐಟಿಐ ಆಯೋಗದ ಸದಸ್ಯ ಡಾ. ವಿ ಕೆ ಪಾಲ್ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಈ ಕುರಿತು ಅವರು ಮಾಹಿತಿ ನೀಡಿದರು.
ಬ್ರಿಟನ್ ನಲ್ಲಿ ಪತ್ತೆಯಾದ ಎಸ್‍ಎಆರ್‍ಎಸ್-ಕೋವಿ-2 ರೂಪಾಂತರಿತ ಕೊರೊನಾ ವೈರಸ್ ಬಗ್ಗೆ ಯಾವುದೇ ಭೀತಿ ಬೇಡ ಎಂದು ಪಾಲ್ ಹೇಳಿದರು.
ಬ್ರಿಟನ್ ನಲ್ಲಿ ಪತ್ತೆಯಾದ ರೂಪಾಂತರಿತ ಎಸ್‍ಎಆರ್‍ಎಸ್-ಕೋವಿ -2 ಅಭಿವೃದ್ಧಿ ಪಡಿಸಿರುವ ಲಸಿಕೆಗಳ ಸಾಮರ್ಥ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅವರು ತಿಳಿಸಿದರು.
ಈ ಹೊಸ ಸವಾಲನ್ನು ನಾವು ನಮ್ಮ ಸಮಗ್ರ ಪ್ರಯತ್ನಗಳ ಮೂಲಕ ಎದುರಿಸಬೇಕಾಗಿದೆ. ಕೊವೀಡ್ ಮಾರ್ಗಸೂಚಿಯನ್ನು ಅನುಸರಿಸಿ ಎಂದು ಅವರು ಹೇಳಿದರು.
ಈ ರೂಪಾಂತರಿತ ವೈರಸ್ ಗೆ ಚಿಕಿತ್ಸೆಯ ಮಾರ್ಗಸೂಚಿಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದರು.
ರೂಪಾಂತರಿತ ವೈರಸ್ ಹೆಚ್ಚು ಸಾಂಕ್ರಾಮಿಕವಾಗಬಹುದು. ಇದು ಜನರಲ್ಲಿ ಸುಲಭವಾಗಿ ಹರಡಬಹುದು ಎಂದು ಪಾಲ್ ತಿಳಿಸಿದರು.