ನಾವು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರು -ಸಚಿವ ಎಸ್ ಟಿ ಎಸ್

ಬೆಂಗಳೂರು: ನಾವು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರು ಎಮದು ಸಹಕಾರ ಸಚಿವ ಎಸ್. ಟಿ. ಸೋಮಶೇಖರ್ ಹೇಳಿದರು.
ಸಚಿವ ಸೋಮಶೇಖರ್ ಅವರು ಬುಧವಾರ ವಿಧನ ಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಎಸ್ ಬಿ ಎಂ ಈಗ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರು. ಕಾಂಗ್ರೆಸ್ ನಿಂದ ಒಂದು ಸನ್ನಿವೇಶದಲ್ಲಿ ಹೊರಬಂದಿದ್ದೇವೆ. ಇನ್ನು ಮತ್ತೆ ಪಕ್ಷ ಬದಲಾವಣೇ ಪ್ರಶ್ನೆಯೇ ಇಲ್ಲ ಎಂದರು.
ನಾವು ಪಕ್ಷದಲ್ಲೇ ಇರುತ್ತೇವೆ. ಇದರಲ್ಲಿ ಯಾವುದೇ ಗೊಂದಲಗಳಗಳಿಲ್ಲ. ಯಾವ ಪಕ್ಷ ವಿಲೀನವಾದರೂ, ಕೈಜೋಡಿಸಿದರೂ ನಮ್ಮ ತಕರಾರು ಇಲ್ಲ. ನಮ್ಮದು ಶಿಸ್ತಿನ ಪಕ್ಷವಾಗಿದ್ದು, ವರಿಷ್ಠರು ಹೇಳಿದ್ದನ್ನು ಪಾಲಿಸಬೇಕಾಗುತ್ತದೆ ಎಂದು ಅವರು ತಿಳಿಸಿದರು.
ಯಾವ ಸಮಯದಲ್ಲಿ ಏನಾಗಬೇಕೋ ಅದನ್ನು ಮುಖ್ಯಮಂತ್ರಿಗಳು ಮಾಡುತ್ತಾರೆ. ಅವರು ಈವರೆಗೂ ನುಡಿದಂತೆ ನಡೆದಿದ್ದಾರೆಂದರು.
ನಮ್ಮ ತಂಡದಲ್ಲಿ ಯಾರಿಗೂ ಭಿನ್ನಾಭಿಪ್ರಾಯಗಳಿಲ್ಲ. ನಾವು ಉತ್ತಮ ಬಾಂಧವ್ಯ ಹೊಂದಿದ್ದೇವೆ. ನಾವೆಲ್ಲರೂ ಈಗ ಬಿಜೆಪಿಯವರು. ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಎಂದು ಪ್ರಶ್ನೆಯೊಂದಕ್ಕೆ ಎಸ್ ಟಿ ಎಸ್ ಉತ್ತರಿಸಿದರು.
ತಾವು ಯಾವ ಬಂಡೆ, ಮರಳೂ ಅಲ್ಲ. ತಮ್ಮಿಂದ ಸಾವಿರಾರು ಜನ ಉಪಯೋಗ ಪಡೆದಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ನೀಡಿರುವ ಹೇಳಿಕೆ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಾವಿರಾರು ಜನರ ಪರಿಶ್ರಮದಿಂದಲೇ ಅವರೂ ಸೇರಿದಂತೆ ನನ್ನಂತಹ ಶಾಸಕರು ಆಯ್ಕೆಯಾಗಿರುತ್ತೇವೆ. ಜನರ ಸಹಕಾರ ಇಲ್ಲದಿದ್ದರೆ ಜನನಾಯಕನ ಅಥವಾ ಶಾಸಕನ ಆಯ್ಕೆ ಹೇಗೆ ತಾನೆ ಸಾಧ್ಯ. ಅವರಿಂದ ನಾವು ಎಂಬುದನ್ನು ಮರೆಯದಿರೋಣ ಎಂದು ಉತ್ತರಿಸಿದರು.