ಮೈಸೂರು: ನೈಟ್ ಕರ್ಪ್ಯೂ ವಿಚಾರದಲ್ಲಿ ಪುನರ್ ವಿಮರ್ಶೆ ಮಾಡಬೇಕಿದೆ ಎಂದು ಎಂಎಲ್‍ಸಿ ಹೆಚ್. ವಿಶ್ವನಾಥ್ ಹೇಳಿದರು.
ನಗರದಲ್ಲಿ ಗುರುವಾರ ವಿರ್ಶವನಾಥ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ನೈಟ್ ಕರ್ಪ್ಯೂ ಬಗ್ಗೆ ಸರ್ಕಾರದ ಪರವಾಗಿ ನಾನು ಸರಿಯಿದೆ ಎಂದು ಹೇಳಬಹುದು. ಆದರೆ ನಾಡಿನ ಜನರು ಇದನ್ನು ಜೋಕ್ ರೀತಿ ತೆಗೆದುಕೊಂಡಿದ್ದಾರೆಂದರು.
ಹೊಸವರ್ಷದ ಆಚರಣೆ ಜನ ಸೇರುತ್ತಾರೆ ಎನ್ನುವುದಾದರೆ ಡಿ. 30, 31 ನೈಟ್ ಕರ್ಪ್ಯೂ ಮಾಡಿ ಈಗಲೇ ಏಕೆ ಎಂದರು.
ನೈಟ್ ಕರ್ಪ್ಯೂ ನಿಂದ ಯಾವುದೇ ಪ್ರಯೋಜನವಿಲ್ಲ. ಕೆಲ ತೀರ್ಮಾನಗಳು ಯೋಚನೆ ಮಾಡಿ ತೆಗೆದುಕೊಳ್ಳಬೇಕು.
ನಗೆಪಾಟಲಿಗೆ ಈಡಾಗಬಾರದು ಎಂದು ವಿಶ್ವನಾಥ್ ಮಾರ್ಮಿಕವಾಗಿ ಹೇಳಿದರು.
ರಾಜ್ಯದಲ್ಲಿ ಶಾಲೆಗಳು ಆರಂಭ ವಿಚಾರವಾಗಿ ಮಾತನಾಡಿದ ವಿಶ್ವನಾಥ್, ಸದ್ಯ ಕೊರೊನಾ ಎರಡನೇ ಅಲೆ ಜೋರಾಗಿದೆ
ಜೀವದ ಜೊತೆ ಚೆಲ್ಲಾಟ ಸರಿಯಲ್ಲ. ಮಕ್ಕಳು ಮನೆಯ ಆಸ್ತಿ ಒಂದನೇ ತಾರೀಖಿನಿಂದ ಶಾಲೆ ಬೇಡ ಎಂದರು.
ಸಂಕ್ರಾಂತಿ ಆದ ಮೇಲೆ ಶಾಲೆ ಆರಂಭಿಸಿ. ಯಾರು ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ. ಹೀಗಾಗಿ ಜ. 1ರಿಂದ ಶಾಲೆ ಆರಂಭ ಬೇಡ ಎಂದರು.
ಕೊಡಗಿನವರು ಹಸು ಮಾಂಸ ತಿನ್ನುತ್ತಾರೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ವಿಶ್ವನಾಥ್ ಪ್ರತಿಕ್ರಿಯಿಸಿ, ಕೊಡವರು ಹಸುವನ್ನು ಪೂಜೆ ಮಾಡುತ್ತಾರೆ. ಇದು ಕೊಡವರಿಗೆ ಮಾಡಿದ ಅವಮಾನ. ನಿಮ್ಮ ಹೇಳಿಕೆಗೆ ನೀವೇ ಕೊಡವರ ಕ್ಷಮೆಯಾಚಿಸಿ ಎಂದು ಸಲಹೆ ನೀಡಿದರು.
ಸಿದ್ಧರಾಮಯ್ಯನವರ ಇಂತಹ ಹೇಳಿಕೆಗಳಲ್ಲಿ ಕಾಂಗ್ರೆಸ್ ಮುಗಿಸುವ ಹುನ್ನಾರ ಇದೆ ಎಂದರು.
ನೈಟ್ ಕರ್ಪ್ಯೂ ವಿಚಾರದಲ್ಲಿ ಪುನರ್ ವಿಮರ್ಶೆ ಮಾಡಬೇಕಿದೆ -ಹೆಚ್. ವಿಶ್ವನಾಥ್

