ಮಾಸ್ಕ್ ಹಾಕದ ಶಾಸಕರಿಗೆ ದಂಡ ಹಾಕಿದ ಪೊಲೀಸರು

ಬೆಂಗಳೂರು: ಮಾಸ್ಕ್ ಹಾಕದ ಶಾಸಕರೊಬ್ಬರಿಗೆ ಪೊಲೀಸರು ನಗರದಲ್ಲಿ ಗುರುವಾರ ದಂಡ ಹಾಕಿದ್ದಾರೆ.
ಮಾಸ್ಕ್ ಹಾಕಿಲ್ಲವೆಂದು ಆಡಳಿತ ಪಕ್ಷದ ಮೂಡಿಗೆರೆ ಶಾಸಕ ಎಂಪಿ ಕುಮಾರಸ್ವಾಮಿ ಅವರಿಗೆ ದಂಡ ವಿಧಿಸಲಾಗಿದೆ.
ಶಾಸಕರು ಶೇಷಾದ್ರಿಪುರಂ ಕಡೆಯಿಂದ ಶಾಸಕರ ಭವನಕ್ಕೆ ತೆರಳುವ ವೇಳೆ ಕಾರಿನಲ್ಲಿದ್ದಾಗ ಮಾಸ್ಕ್ ಹಾಕಿಲ್ಲ ಎಂದು ಟ್ರಾಫಿಕ್ ಪೆÇೀಲೀಸರು 250 ರೂ. ದಂಡ ಹಾಕಿದ್ದಾರೆ.
ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಶಾಸಕ ಎಂಪಿ ಕುಮಾರಸ್ವಾಮಿ ಪತ್ರ ಬರೆದು ತಾವು ಮಾಸ್ಕ್ ಹಾಕಿದ್ದರೂ ತಮಗೆ ಪೊಲೀಸರು ವ್ಯಥಾ ದಂಡ ವಿಧಿಸಿದ್ದಾರೆ ಎಂದು ದೂರಿದ್ದಾರೆ.