ಚೆನ್ನೈ: ಹೊಸ ಪಕ್ಷ ಕುರಿತು ಡಿ. 31ರಂದು ಘೋಷಣೆ ಮಾಡುವುದಾಗಿ ಹೇಳಿದ್ದ ನಟ ಸೂಪರ್ ಸ್ಟಾರ್ ರಜಿನಿಕಾಂತ್ ಇದೀಗ ತಮ್ಮ ತೀರ್ಮಾನವನ್ನು ಬದಲಿಸಿ ರಾಜಕೀಯದಿಂದ ಹಿಂದೆ ಸರಿದಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ರಜನಿಕಾಂತ್, ಮೂರು ಪುಟಗಳ ವಿವರಣೆ ನೀಡಿದ್ದಾರೆ.
ಅನಾರೋಗ್ಯ ಕಾರಣ ಸದ್ಯಕ್ಕೆ ರಾಜಕೀಯಕ್ಕೆ ಬರುವುದಿಲ್ಲ ಎಂದು ರಜಿನಿಕಾಂತ್ ತಿಳಿಸಿದ್ದಾರೆ.
ಸದ್ಯಕ್ಕೆ ರಾಜಕೀಯಕ್ಕೆ ಬರುವುದಕ್ಕೆ ಆಗುವುದಿಲ್ಲ. ಆರೋಗ್ಯದಿಂದ ಪಕ್ಷ ಕಟ್ಟಲು ಆಗುವುದಿಲ್ಲ. ನಿಮ್ಮನ್ನು ನಿರಾಸೆಗೊಳಿಸಿದ್ದಕ್ಕೆ ಕ್ಷಮೆ ಇರಲಿ ಎಂದು ನಟ ರಜಿನಿಕಾಂತ್ ತಿಳಿಸಿದ್ದಾರೆ.

