ಬೆಂಗಳೂರು: ನನ್ನ ಸ್ನೇಹಿತ ಧರ್ಮೇಗೌಡ ನನ್ನನ್ನು ಅಗಲಿ ಹೋಗಿದ್ದಾನೆ. ‘ಇದು ರಾಜಕಾರಣದ ಕೊಲೆ’ ಎಂದು ಹೇಳುವೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ರೈಲ್ವೆ ಹಳಿಗೆ ತಲೆಕೊಟ್ಟು ಪರಿಷತ್ ಉಪಸಭಾಪತಿ ಎಸ್.ಎಲ್.ಧರ್ಮೇಗೌಡ ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಎಚ್.ಡಿ.ಕುಮಾರಸ್ವಾಮಿ ಮಾನಾಡಿ, ಇಂತಹ ಘಟನೆ ಸಹಿಸುವುದಕ್ಕೆ ಆಗುವುದಿಲ್ಲ ಎಂದರು.
ಧರ್ಮೇಗೌಡ ನನ್ನ ಒಡಹುಟ್ಟಿದ ಸಹೋದರನಂತೆ ಇದ್ದರು. ಧರ್ಮೇಗೌಡ ತಂದೆ ಲಕ್ಷಯ್ಯ ಒಂದು ಮಾತು ನನಗೆ ಹೇಳಿದ್ದರು. ನಾನಂತೂ ಮಂತ್ರಿ ಆಗಲಿಲ್ಲ. ನಾನು ಬದುಕಿರುವಾಗಲೇ ನನ್ನ ಪುತ್ರ ಮಂತ್ರಿ ಆಗವಬೇಕೆಂದಿದ್ದರು. ಆದರೆ, ಅವರ ಆಸೆ ಈಡೇರಿಸಲು ಆಗಲಿಲ್ಲ ಎಂದು ಹೆಚ್ ಡಿಕೆ ನೊಂದು ನುಡಿದರು.
ಧರ್ಮೇಗೌಡ ಸಾವು: ಇದು ರಾಜಕಾರಣದ ಕೊಲೆ -ಎಚ್.ಡಿ.ಕುಮಾರಸ್ವಾಮಿ

