ಬೆಂಗಳೂರು ಸೇರಿ ಭಾರತದಲ್ಲಿ ರೂಪಾಂತರಗೊಂಡ ವೈರಾಣು ಪತ್ತೆ

ಬೆಂಗಳೂರು: ಭಾರತದಲ್ಲೂ ಈಗ ಬ್ರಿಟನ್ ನಲ್ಲಿ ರೂಪಾಂತರಗೊಂಡ ವೈರಣು ಭೀತಿ ಕಾಡತೊಡಗಿದೆ.
ಬ್ರಿಟನ್ ನಿಂದ ಭಾರತಕ್ಕೆ ಬಂದಿರುವ 6 ಮಂದಿಯಲ್ಲಿ ರೂಪಾಂತರಗೊಂಡ ಕೊರೊನಾ ವೈರಾಣು ಸೋಂಕು ಪತ್ತೆ ಆಗಿದೆ.
ಕೇಂದ್ರ ಆರೋಗ್ಯ ಸಚಿವಾಲಯ ಈ ಮಾಹಿತಿಯನ್ನು ದೃಢೀಕರಿಸಿದೆ.
ಬೆಂಗಳೂರಿಗೆ ಬ್ರಿಟನ್ ನಿಂದ ಆಗಮಿಸಿದ್ದವರ ಸ್ಯಾಂಪಲ್ ಗಳನ್ನು ನಿಮ್ಹಾನ್ಸ್ ಗೆ ಕಳಿಸಿಕೊಡಲಾಗಿತ್ತು. ಈ ಪೈಕಿ ಮೂವರ ರೂಪಾಂತರಗೊಂಡ ಬ್ರಿಟನ್ ಕೊರೋನಾ ವೈರಸ್ ಸೋಂಕು ದೃಢಪಟ್ಟಿದೆ.
ಹೈದರಾಬಾದ್ ನಲ್ಲಿ ಎರಡು ಪ್ರಕರಣಗಳು ಹಾಗೂ ಪುಣೆಯಲ್ಲಿ ಒಂದು ರೂಪಾಂತರಗೊಂಡ ಪ್ರಕರಣಗಳು ಪತ್ತೆಯಾಗಿದ್ದು, ಎಲ್ಲರನ್ನೂ ಒಂದೇ ಕೊಠಡಿಯಲ್ಲಿ ಐಸೊಲೇಷನ್ ನಲ್ಲಿರಿಸಲಾಗಿದೆ.